ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್: ಕಮಿಶನರ್ ಡಾ. ಬೋರಲಿಂಗಯ್ಯ ಹೇಳಿದ್ದೇನು..!!

ಬೆಳಗಾವಿಯಲ್ಲಿ ಬೆಳ್ಳಂಬೆಳಿಗ್ಗೆ ಕೊಲೆ ಪ್ರಕರಣದ ಆರೋಪಿ ವಿಶಾಲ್ ಸಿಂಗ್ ಮೇಲೆ ಪೊಲೀಸ್ ಫೈರಿಂಗ್ ನಡೆದಿದೆ. ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ ಹಿನ್ನೆಲೆ ನಮ್ಮ ಅಧಿಕಾರಿಗಳು ಸ್ವಯಂ ರಕ್ಷಣೆಗೆ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ನಗರಪೊಲೀಸ್ ಆಯುಕ್ತರಾದ ಡಾ. ಬೋರಲಿಂಗಯ್ಯ ಹೇಳಿದ್ದಾರೆ.
ಕೊಲೆ ಆರೋಪಿ ವಿಶಾಲ್ ಸಿಂಗ್ ಮೇಲೆ ಪೊಲೀಸ್ ಫೈರಿಂಗ್ ಕುರಿತಂತೆ ಮಾಧ್ಯಮಗಳಿಗೆ ನಗರಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ, ಬೆಳಗಾವಿ ಗ್ರಾಮಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಅಧಿಕಾರಿಗಳು ಆರೋಪಿಯೊಬ್ಬನನ್ನು ಬಂಧಿಸಲು ಪ್ರಯತ್ನಿಸುತ್ತಿದ್ದರು. ಆದರೆ ಆತ ಕಳೆದ ಮಾರ್ಚ್‍ನಿಂದ ತಲೆಮರೆಸಿಕೊಂಡಿದ್ದ. ನಿನ್ನೆ ಆರೋಪಿಯನ್ನು ಬಂಧಿಸಲು ಹೋದಾಗ ಆರೋಪಿಯು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ.
ಈ ವೇಳೆ ಸ್ವಯಂ ರಕ್ಷಣೆಯ ಹಿನ್ನೆಲೆಯಲ್ಲಿ ನಮ್ಮ ಅಧಿಕಾರಿಗಳು ಅವನ ಮೇಲೆ ಫೈರಿಂಗ್ ಮಾಡಿದ್ದಾರೆ. ಈ ವೇಳೆ ಆರೋಪಿಯ ಕಾಲಿಗೆ ಗಾಯವಾಗಿದೆ. ಈ ಕುರಿತಂತೆ ತನಿಖೆ ನಡೆಸಿದ್ದಾರೆ. ಆರೋಪಿಯು ಹಗಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಇನ್ನೂ ಯಾವ ಯಾವ ಪ್ರಕರಣಗಳಲ್ಲಿ ಈತನ ಮೇಲೆ ಕೇಸ್ ದಾಖಲಾಗಿವೆ ಎಂಬುದರ ಕುರಿತಂತೆ ತನಿಖೆ ಮಾಡಲಾಗುತ್ತಿದೆ.
ನಿನ್ನೆ ಬೈಕ್ ಮೇಲೆ ಆರೋಪಿ ತೆರಳುವಾಗ ನಮ್ಮ ಪೊಲೀಸರು ಅಡ್ಡ ಹಾಕಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿಯ ಮೇಲೆ ಆರೋಪಿ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಹಾಗಾಗಿ ಸ್ವಯಂ ರಕ್ಷಣೆ ಹಿನ್ನೆಲೆ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಆರೋಪಿಯ ಮೊಣಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾನೆ ಎಂದರು.