Crime News
ಸಾರ್ವಜನಿಕರ ಎದುರಲ್ಲೇ ವ್ಯಕ್ತಿಯ ಬರ್ಬರ ಹತ್ಯೆ; ಹಾಡಹಗಲೇ ನಡೆದ ಘೋರ ಕೃತ್ಯ ಕಂಡು ಬೆಚ್ಚಿಬಿದ್ದ ಜನರು

ದಾವಣಗೆರೆ: ವ್ಯಕ್ತಿಯೋರ್ವನನ್ನು ಹಾಡಹಗಲೇ ಸಾರ್ವಜನಿಕರ ಎದುರಲ್ಲಿ ಚಾಕುವಿನಿಂದ ಕುತ್ತಿಗೆ ಸೀಳಿ, ಬರ್ಬರವಾಗಿ ಕೊಂದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದಿದೆ.
ಜಾಕೀರ್ (50) ಕೊಲೆಯಾದ ವ್ಯಕ್ತಿ. ಹಳೆ ದ್ವೇಷದ ಕಾರಣಕ್ಕೆ ದುಷ್ಕರ್ಮಿಗಳು ಜಾಕೀರ್ ನನ್ನು ಹತ್ಯೆಗೈದಿದ್ದಾರೆ ಎನ್ನಲಾಗಿದೆ.
ಅಲ್ಲದೇ ಜಾಕೀರ್ ರೌಡಿ ಶೀಟರ್ ಆಗಿದ್ದು, ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೊದಲು ಜಾಕೀರ್ ಮೇಲೆ ನಡು ರಸ್ತೆಯಲ್ಲಿ ಅಟ್ಯಾಕ್ ಮಾಡಿದ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ. ನಿತ್ರಾಣನಾಗಿ ಕುಸಿದು ಬಿದ್ದವನ ಕತ್ತು ಕೊಯ್ದು ಬಳಿಕ ಮಾರಕಾಸ್ತ್ರಗಳಿಂದ ತಲೆ ಕತ್ತರಿಸಿದ್ದಾರೆ ಎನ್ನಲಾಗಿದೆ. ಈ ಭೀಕರ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿಯಲಾಗಿದೆ.