ಬೆಳಗಾವಿಯ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ 6 ತಿಂಗಳಲ್ಲಿ ಲೋಕಾರ್ಪಣೆ ಶಾಸಕ ಅನೀಲ್ ಬೆನಕೆ

ಬೆಳಗಾವಿ ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಿರ್ಮಾಣ ಮಾಡುತ್ತಿರುವ ಸೂಪರ್ ಸ್ಪೇಶಾಲಿಟಿ ಆಸ್ತ್ರೆಯ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಬೆಳಗಾವಿ ಉತ್ತರ ಶಾಸಕರಾದ ಅನೀಲ್ ಬೆನಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳಗಾವಿಯ ಚೆನ್ನಮ್ಮಾಜಿ ವೃತ್ತದ ಸಮೀಪದಲ್ಲಿರುವ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಿರ್ಮಾಣ ಮಾಡಲಾಗುತ್ತಿರುವ 4 ಅಂತಸ್ತಿನ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಯ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಇಂದು ಬೆಳಗಾವಿಯ ಉತ್ತರ ಶಾಸಕರಾದ ಅನೀಲ್ ಬೆನಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗುತ್ತಿಗೆದಾರರು, ಇಂಜನೀಯರ್, ಹಾಗೂ ಆಡಳಿತಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಕಾಮಗಾರಿ ನಡೆಯುತ್ತಿರುವ ಕುರಿತು ಮಾಹಿತಿಯನ್ನು ಪಡೆದುಕೊಂಡರು. ಇನ್ನು ಆರು ತಿಂಗಳ ಒಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಅನುಕೂಲಕ್ಕೆ ಆಸ್ಪತ್ರೆಯನ್ನು ನೀಡುವಂತೆ ಸೂಚನೆ ನೀಡಿದರು.
ಈ ವೇಳೆ ಆಸ್ಪತ್ರೆಯ ಪರಿಶೀಲನೆಯ ಬಳಿಕ ಮಾಧ್ಯಮಳೊಂದಿಗೆ ಮಾತನಾಡಿದ ಶಾಸಕ ಅನೀಲ್ ಬೆನಕೆ, ಈ ಆಸ್ಪತ್ರೆಯ ಕಟ್ಟಡವನ್ನು 2018ರಲ್ಲಿ ಪ್ರಾರಂಭ ಮಾಡಲಾಗಿದೆ. ಮಳೆ ಹಾಗೂ ಕೊರೊನಾ ಕಾರಣದಿಂದ ಕಟ್ಟಡ ನಿರ್ಮಾಣ ಸ್ವಲ್ಪ ವಿಳಂಬವಾಗಿದೆ.
ಇನ್ನು ಇದು ನಾಲ್ಕು ಅಂತಸ್ತಿನ ಬೃಹತ್ ಕಟ್ಟಡವಾಗಿದ್ದು ಒಟ್ಟು 8 ವಿಭಾಗಗಳು ಇಲ್ಲಿ ಕಾರ್ಯ ನಿರ್ವಹಿಸುತ್ತವೆ ಎಂದು ವಿವಿಧ ವಿಭಾಗಗಳ ಕಾರ್ಯ ನಿರ್ವಹಣೆ ಕುರಿತಂತೆ ಮಾಹಿತಿ ನೀಡಿದರು.ಒಟ್ಟಾರೆ 140 ಕೋಟಿ ರೂ ಖರ್ಚು ಮಾಡಿ ಇಲ್ಲಿ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಹಾಗಾಗಿ ಅದು ಪೂರ್ಣಗೊಳ್ಳಲು ಇನ್ನೂ ಆರು ತಿಂಗಳ ಕಾಲ ಬೇಕಾಗಬಹುದು. ಈ ಕುರಿತಂತೆ ಇಂದು ಗುತ್ತಿಗೆದಾರರು ಹಾಗೂ ಇಂಜನೀಯರ್‍ಗಳನ್ನು ಕರೆದು ಪರಿಶೀಲನೆ ನಡೆಸಿದ್ದೇವೆ ಎಂದರು.
ಮುಂಬರುವ ದಿನಗಳಲ್ಲಿ ಈ ಆಸ್ಪತ್ರೆಯಲ್ಲಿ ಆಗಬೇಕಾದ ಕೆಲಸಗಳನ್ನು ಕುರಿತಂತೆ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಈ ಆಸ್ಪತ್ರೆಯಲ್ಲಿ ಪ್ರಮುಖ ಮೂರು ಕಾರ್ಯಗಳು ಆಗಬೇಕು. ತಾಯಿ ಹಾಗೂ ಮಕ್ಕಳ ಆಸ್ಪತ್ರೆ, ಟ್ರೀಮಾ ಸೆಂಟರ್ ಸ್ಥಾಪನೆ, ನಸಿಂಗ್ ಕಾಲೇಜ್‍ನ್ನೂ ಕೂಡ ಸಾಪನೆ ಮಾಡಲಾಗುತ್ತದೆ. ಇನ್ನು ಒಂದು ತಿಂಗಳ ಅವಧಿಯಲ್ಲಿಯೇ ಇಲ್ಲಿ ಅದಕ್ಕೆ ಶಿಲಾನ್ಯಾಸವನ್ನು ನೆರವೇರಿಸಲಾಗುತ್ತದೆ. ಇನ್ನು ಜನತೆಗೆ ಈ ಎಲ್ಲಾ ಸೌಲಭ್ಯಗಳು ಉಚಿತವಾಗಿ ಸಿಗಲಿದ್ದು ಯಾರೂ ಕೂಡ ಹಣ ನೀಡುವ ಅವಶ್ಯಕತೆಯಿಲ್ಲ. ಹಾಗಾಗಿ ಇನ್ನು 6 ತಿಂಗಳ ಒಳಗಾಗಿ ಈ ಕಟ್ಟಡವನ್ನು ಲೋಕಾರ್ಪಣೆ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.
ಇನ್ನು ನಗರದಲ್ಲಿ ಆರು ತಿಂಗಳ ಒಳಗಾಗಿ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಬೆಳಗಾವಿ ನಗರದಲ್ಲಿ ಕಾರ್ಯಾರಂಭ ಮಾಡುತ್ತದೆ ಎಂದು ಶಾಸಕರು ತಿಳಿಸಿದ್ದಾರೆ. ಒಟ್ಟಾರೆ ಆದಷ್ಟು ಬೇಗನೇ ಈ ಎಲ್ಲಾ ಕೆಲಸಗಳು ಮುಕ್ತಾಯವಾಗಿ ಆಸ್ಪತ್ರೆಯು ಸಾರ್ವಜನಿಕರ ಆರೋಗ್ಯ ಸೇವೆಗೆ ಲಭ್ಯವಾಗಲಿ ಎಂಬುದೇ ಎಲ್ಲರ ಆಶಯ.