EducationKarnataka News
ಖಾನಾಪುರ ಪಟ್ಟಣದಲ್ಲಿಂದು ತಾಲೂಕ ಆಡಳಿತದಿಂದ 8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ
ನಿತ್ಯ ಅರೋಗ್ಯಕ್ಕೆ ಯೋಗ ಬೇಕು : ಶಾಸಕಿ ಅಂಜಲಿ ನಿಂಬಾಳ್ಕರ್

ಬೆಳಗಾವಿ : ಖಾನಾಪುರ ಪಟ್ಟಣದಲ್ಲಿಂದು ತಾಲೂಕ ಆಡಳಿತದಿಂದ 8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್, ನಾವು ಆರೋಗ್ಯವಂತವಾಗಿ ಇರಬೇಕಾದರೆ ಪ್ರತಿದಿನ ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಕಾಲಮಾನದ ದಿನಗಳಲ್ಲಿ ಕೆಲಸದ ಒತ್ತಡಗಳು ಅನೇಕ ಇತರ ಒತ್ತಡಗಳಿಂದಾಗಿ ನಾವು ತಿಳಿದು ತಿಳಿಯದೆ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದೇವೆ ಅದು ಯಾವ ಮಟ್ಟಿಗೆ ನಿರ್ಲಕ್ಷಿಸುತ್ತಿದ್ದೇವೆ ಎಂದರೆ ನಮ್ಮ ಜೀವನದ ಕಾಳಜಿ ಇಲ್ಲದಂತಾಗಿದೆ. ನಾವು ಯೋಗ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾನಸಿಕ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಖಾನಾಪುರ್ ತಹಶೀಲ್ದಾರ್ ಇಸ್ಲಾಂ ಮತ್ತು ಕೈಸ್ತ ಧರ್ಮಗುರುಗಳು, ಅಧಿಕಾರಿ ವರ್ಗ ಮತ್ತು ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.