ಮೂರು ತಿಂಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಆರೋಪಿ ಮೇಲೆ ಫೈರಿಂಗ್, ಖಚಿತ ಮಾಹಿತಿ ಮೇರೆಗೆ ದಾಳಿ, ಘಟನೆಯಲ್ಲಿ ಓರ್ವ ಪೇದೆಗೆ ಗಾಯ

ಆರೋಪಿ ಮೇಲೆ ಫೈರಿಂಗ್
ರೌಡಿಶೀಟರ್ ವಿಶಾಲ್ ಸಿಂಗ್ ಚೌಹ್ಹಾಣ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದು, ಸದ್ಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ವಿಶಾಲ್ ಮೇಲೆ 8ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಪೊಲೀಸರಿಗೆ ಆತ ಬೇಕಾಗಿದ್ದ. ಮಾರ್ಚ್ 15ರಂದು ಬೆಳಗಾವಿಯ ಮಂಡೋಳಿ ರಸ್ತೆಯಲ್ಲಿ ರಿಯಲ್ ಎಸ್ಟೆಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ್ ಕೊಲೆಯಾಗಿತ್ತು. ಈ ಪ್ರಕರಣ ಸಂಬಂಧ ಎರಡನೇ ಪತ್ನಿ ಹಾಗೂ ಉದ್ಯಮದಲ್ಲಿ ಇರೋ ಸಹ ಪಾಲುದಾರರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಆದರೇ ಈ ಪ್ರಕರಣದಲ್ಲಿ ಸುಫಾರಿ ಪಡೆದಿದ್ದ ಪ್ರಮುಖ ಆರೋಪಿ ವಿಶಾಲ್ ಸಿಂಗ್ ಚೌಹ್ಹಾಣ್ ಕಳೆದ ಮೂರು ತಿಂಗಳಿಂದ ಪೊಲೀಸರ ಕೈಗೆ ಸಿಕ್ಕಿಲಿಲ್ಲ. ಆರೋಪಿ ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಮದ್ಯಪ್ರದೇಶದಲ್ಲಿ ಓಡಾಡಿಕೊಂಡು ಇದ್ದ. ಹಣ ಖಾಲಿಯಾದ ಬಳಿಕ ಮರಳಿ ಬೆಳಗಾವಿಗೆ ಆಗಮಿಸಿದ್ದನು.
ಖಚಿತ ಮಾಹಿತಿ ಮೇರೆಗೆ ದಾಳಿ
ಖಚಿತ ಮಾಹಿತಿ ಮೇರೆಗೆ ಇಂದು ಮುಂಜಾನೆ 3.30ರ ಸಮಯದಲ್ಲಿ ಆರೋಪಿ ವೀರಭದ್ರ ನಗರದಿಂದ ರಾಷ್ಟ್ರೀಯ ಹೆದ್ದಾರಿ ಕಡೆಗೆ ಹೋಗುವ ವಿಚಾರ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಆರೋಪಿ ವಿಶಾಲ್ ಚೌಹ್ಹಾಣ್ ಬೆನ್ನತ್ತಿದ್ದು ಕ್ರೈಂ ವಿಭಾಗದ ಎಸಿಪಿ ನಾರಾಯಣ ಬರಮನಿ ನೇತೃತ್ವದ ತಂಡ. ರಸ್ತೆಯ ಮದ್ಯದಲ್ಲಿ ಆರೋಪಿಯ ಬೈಕ್ ಸ್ಕಿಡ್ ಆಗಿದ್ದು, ಆತ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಪೊಲೀಸ್ ಸಿಬ್ಬಂದಿ ಓರ್ವ ಆತನನ್ನು ಬಂಧಿಸಲು ಮುಂದಾಗಿದ್ದರು. ಈ ವೇಳೆಯಲ್ಲಿ ಆರೋಪಿ ವಿಶಾಲ್ ಸಿಂಗ್ ಪೊಲೀಸ್ ಸಿಬ್ಬಂದಿಯ ಮೇಲೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದನು.
ಬಳಿಕ ಎಸಿಪಿ ನಾರಾಯಣ ಬರಮನಿ ಒಂದು ಸುತ್ತು ಗಾಳಿಯಲ್ಲಿ ಪೈರ್ ಮಾಡಿದ್ದರು. ಬಳಿಕ ವಿಶಾಲ್ ಮೇಲೆ ಪೈರಿಂಗ್ ಮಾಡಿದ್ದಾರೆ. ಆರೋಪಿಯ ಎಡಗಾಲಿಗೆ ಗಾಯವಾಗಿದ್ದು, ಆತನನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿಯ ಬಳಿ ಎರಡು ಚಾಕು, ಒಂದು ನಾಡಪಿಸ್ತೂಲ ಪತ್ತೆಯಾಗಿದೆ.
ಘಟನೆಯಲ್ಲಿ ಓರ್ವ ಪೇದೆಗೆ ಗಾಯ
ಫೈರಿಂಗ್ ಸಂಬಂದ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದ್ದು, ಸ್ಥಳಕ್ಕೆ ಮಾರ್ಕೆಟ್ ಎಸಿಪಿ ಭೇಟಿ ನೀಡಿ ಸ್ಥಳ ಮಹಜರ್ ನಡೆಸಿದ್ದಾರೆ. ಇನ್ನೂ ಘಟನೆಯಲ್ಲಿ ಓರ್ವ ಪೊಲೀಸ್ ಪೇದೆಗೆ ಗಾಯವಾಗಿದ್ದು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯ ಬಗ್ಗೆ ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಆರೋಪಿ ವಿಶಾಲ್ ಸಿಂಗ್ ಚೌಹ್ಹಾಣ್ ಮೇಲೆ ಕೊಲೆಗೆ ಸಂಚು, ಕೊಲೆ, ಕೊಲೆ ಯತ್ನ, ಡಕಾಯಿತಿ ಸೇರಿ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದನು. ಇಂದು ಮುಂಜಾನೆ ಫೈರಿಂಗ್ ನಡೆದಿದೆ. ಈ ಬಗ್ಗೆ ಇನ್ನೂಷ್ಟು ಮಾಹಿತಿಯನ್ನು ನಾವು ಸಂಗ್ರಹ ಮಾಡುತ್ತಿದ್ದೇವೆ ಎಂದಿದ್ದಾರೆ.
ಇನ್ನೂ ಬೆಳಗಾವಿಯಲ್ಲಿ ನಡೆದಿರೋ 4ನೇ ಫೈರಿಂಗ್ ಇದಾಗಿದೆ. ಈ ಹಿಂದೆ ಕುಖ್ಯಾತ ಭೂಗತ ಪಾತಕಿ ರಾಜು ಕಣಬರಕರ್ ಹಾಗೂ ಪ್ರವೀಣ್ ಶಿಂತ್ರೆಯನ್ನು ಎನ್ ಕೌಂಟರ್ ಮಾಡಲಾಗಿತ್ತು. ಬಳಿಕ 2015ರಲ್ಲಿ ಸರಗಳ್ಳರ ಮೇಲೆ ಫೈರಿಂಗ್ ಮಾಡಲಾಗಿತ್ತು. ಮೂರು ಪ್ರಕರಣದಲ್ಲಿ ಎಸಿಪಿ ನಾರಾಯಣ ಬರಮನಿ ಎನ್ನುವುದು ವಿಶೇಷವಾಗಿದೆ.