BREAKING NEWS: ನಟ ದಿಗಂತ್ ಆರೋಗ್ಯವಾಗಿದ್ದಾರೆ, -ಮಣಿಪಾಲ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಬೆಂಗಳೂರು: ನಟ ದಿಗಂತ್ ( Actor Diganth ) ಗೋವಾದಲ್ಲಿ ಪಲ್ಟಿ ಹೊಡೆಯುವಾಗ ಗಾಯಗೊಂಡು, ಬೆಂಗಳೂರಿನ ಹಳೆ ಮದ್ರಾಸ್ ರಸ್ತೆಯಲ್ಲಿರುವಂತ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಅವರು ಆರೋಗ್ಯವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂಬುದಾಗಿ ಮಣಿಪಾಲ್ ಆಸ್ಪತ್ರೆಯು ತಿಳಿಸಿದೆ.
ಈ ಬಗ್ಗೆ ನಟ ದಿಗಂತ್ ಅವರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವಂತ ಮಣಿಪಾಲ್ ಆಸ್ಪತ್ರೆಯ ಆಡಳಿತ ಮಂಡಳಿಯು, ನಟ ದಿಗಂತ್ ಸ್ಪೋರ್ಟ್ಸ್ ಇಂಜುರಿಯಿಂದ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಅವರ ಚಿಕಿತ್ಸೆ ಮುಂದುವರೆದಿದೆ. ವೈದ್ಯಕೀಯ ಸಿಬ್ಬಂದಿಗಳು ಅವರು ಶೀಘ್ರವೇ ಗುಣಮುಖರಾಗಲು ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಅವರ ಆರೋಗ್ಯದ ಕುರಿತಾದ ಮತ್ತಷ್ಟು ಮಾಹಿತಿಯನ್ನು ಮತ್ತೆ ಬಿಡುಗಡೆ ಮಾಡೋದಾಗಿ ತಿಳಿಸಿದೆ.
ಅಂದಹಾಗೇ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈ ಜೊತೆಗೆ ಗೋವಾಕ್ಕೆ ಫ್ಯಾಮಿಲಿ ಟ್ರಿಪ್ ಹೋಗಿದ್ದರು. ಈ ವೇಳೆಯಲ್ಲಿ ಸಮುದ್ರದ ತಟದಲ್ಲಿ ಪಲ್ಟಿ ಹೊಡೆಯುವಂತ ವೇಳೆಯಲ್ಲಿ ಆಯತಪ್ಪಿ ಬಿದ್ದು, ಕುತ್ತಿಗೆಗೆ ಗಾಯವಾಗಿತ್ತು. ಅವರನ್ನು ಕೂಡಲೇ ಗೋವಾದಲ್ಲಿರುವಂತ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಎರಡು ದಿನಗಳ ಹಿಂದೆ ದಾಖಲಿಸಲಾಗಿತ್ತು.
ಗೋವಾದಿಂದ ಹೆಚ್ಚಿನ ಚಿಕಿತ್ಸೆಗಾಗಿ ಇಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏರ್ ಲಿಫ್ಟ್ ಮೂಲಕ ನಟಿ ಐಂದ್ರಿತಾ ರೈ ಕರೆತಂದಿದ್ದರು. ಮಣಿಪಾಲ್ ಆಸ್ಪತ್ರೆಯಲ್ಲಿ ಅವರ ಕುತ್ತಿಗೆ ಭಾಗದ ಗಾಯಕ್ಕೆ ಸರ್ಜರಿಯನ್ನು ಸ್ಟೈನ್ ಸರ್ಜನ್ ಡಾ.ವಿದ್ಯಾಧರ ಮತ್ತು ತಂಡ ನಡೆಸುತ್ತಿದೆ ಎಂದು ತಿಳಿದು ಬಂದಿದೆ.