Karnataka News
ಅಕ್ರಮ ಮದ್ಯ ಸಾಗಾಟ: 125. ಲೀಟರ್ ಮದ್ಯ ವಶಕ್ಕೆ

ಖಾನಾಪೂರ ತಾಲೂಕಿನ ಕಣಕುಂಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವಾ ಅಕ್ರಮ ಮದ್ಯವನ್ನು ಹಾಗೂ ಒಬ್ಬ ಆರೋಪಿ ಮತ್ತು ಮದ್ಯ ಸಾಗಿಸುತ್ತಿದ್ದ ವಾಹನವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ
ಜೂನ್ 21 ರಂದು ಬೆಳಿಗ್ಗೆ 8.30ರ ಸುಮಾರಿಗೆ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಎಕ್ಸ್.ಯು.ವಿ 500 ವಾಹನದಲ್ಲಿ 8 ವಿಧದ 750 ಎಂ.ಎಲ್ ಅಳತೆಯ ಒಟ್ಟು 167 ಬಾಟಲಿಗಳಲ್ಲಿ ಬರೋಬ್ಬರಿ 125.250 ಲೀಟರ್ ಗೋವಾ ಅಕ್ರಮ ಮದ್ಯ ಪತ್ತೆಯಾಗಿದೆ. ಮಹಾರಾಷ್ಟ್ರ ಮೂಲದ ಎ1 ಆರೋಪಿ ಪ್ರತೀಕ್ ಮಾಳಿ ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡಿದು,್ದ ವಾಹನ ಹಾಗೂ ಮದ್ಯ ಸೇರಿ ಒಟ್ಟು 6,08,560 ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಾಹನದ ಮಾಲೀಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.