fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
Karnataka News
Trending

ಬೆಳಗಾವಿ ಸೇರಿದಂತೆ ಇಡೀ ರಾಜ್ಯವೇ ಬೆಚ್ಚಿ ಬೀಳಿಸಿದ್ದ ತ್ರಿವಳಿ ಕೊಲೆ, ಆರೋಪಿ ಪ್ರವೀಣ್ ಭಟ್ ನಿರ್ದೋಶಿ- ಹೈಕೋರ್ಟ್ ತೀರ್ಪು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

ಬೆಳಗಾವಿ ಸೇರಿದಂತೆ ಇಡೀ ರಾಜ್ಯವೇ ಬೆಚ್ಚಿ ಬೀಳಿಸಿದ್ದ ಕುವೆಂಪು ನಗರದ ತ್ರಿವಳಿ ಕೊಲೆ ಆರೋಪಿ ಪ್ರವೀಣ್ ಭಟ್ ಗೆ ಧಾರವಾಡ ಹೈಕೋರ್ಟ್ ನಿರ್ದೋಷಿ ಎಂದು ಆದೇಶ ಹೊರಡಿಸಿದೆ.

ಅನೈತಿಕ ಬಟ್ಟೆ ವ್ಯಾಪಾರಿಯಾಗಿ ಮನೆಗೆ ನುಗ್ಗಿ ತಾಯಿ ಇಬ್ಬರು ಮಕ್ಕಳ ಕಗ್ಗೊಲೆ ಮಾಡಿದ ಯುವಕ. ಈ ಪ್ರಕರಣದ ಆರೋಪಿ ಪ್ರವೀಣ್ ಭಟ್ ನಿರ್ದೋಷಿ ಎಂದು ಹೈಕೋರ್ಟ್ ಧಾರವಾಡ ಪೀಠ ಆದೇಶ ಹೊರಡಿಸಿದೆ. ಇದಕ್ಕಿಂತ ಪೂರ್ವದಲ್ಲಿ ಬೆಳಗಾವಿ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿದ್ದ ಆದೇಶ ತಿರಸ್ಕರಿಸಿರುವ ಹೈಕೋರ್ಟ್ ಜೂನ್ 21 ರಂದು ಪ್ರವೀಣ್ ಭಟ್ ನಿರ್ದೋಷಿ ಎಂದು ತೀರ್ಪು ನೀಡಿದೆ. ನ್ಯಾಯಾಧೀಶರಾದ ಕೆ.ಎಸ್. ಮುದಗಲ್, ಎಂಜಿಎಸ್ ಕಮಲ್ ಈ ಆದೇಶ ಹೊರಡಿಸಿದ್ದಾರೆ.

ಇನ್ನೂ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ತ್ರಿವಳಿ ಕೊಲೆ ಪ್ರಕರಣ ಸಂಬಂಧ ದೂರು ದಾಖಲಾಗಿತ್ತು. ಇದಾದ ಬಳಿಕ ಕೋರ್ಟ್‍ಗೆ ಎಪಿ ಠಾಣೆ ಪೊಲೀಸರು ಜಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ನಂತರ ಬೆಳಗಾವಿ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸುಧೀರ್ಘ ವಿಚಾರಣೆ ನಡೆಸಿ 16 ಎಪ್ರಿಲ್ 2018ರಂದು ಪ್ರವೀಣ್ ಭಟ್‍ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಇಷ್ಟಕ್ಕೂ ಘಟನೆಯ ಹಿನ್ನೆಲೆಯೇನೆಂದರೆ, ಬೆಳಗಾವಿಯ ಕುವೆಂಪು ನಗರದಲ್ಲಿ 2015 ಆಗಸ್ಟ್ 16 ರಂದು ನಸುಕಿನ ಜಾವ ತಾಯಿ ಇಬ್ಬರು ಮಕ್ಕಳ ಕೊಲೆ ನಡೆದಿತ್ತು. ಇಲ್ಲಿ ತಾಯಿ ರೀನಾ ಮಾಲಗತ್ತಿ ಮಗ ಆದಿತ್ಯ ಮಾಲಗತ್ತಿ, ಮಗಳು ಸಾಹಿತ್ಯ ಮಾಲಗತ್ತಿಯನ್ನು ಕೊಲೆಗೈಯ್ಯಲಾಗಿತ್ತು. 24 ಗಂಟೆಯಲ್ಲೇ ಎಪಿಎಂಸಿ ಪೊಲೀಸರು ಪ್ರವೀಣ್ ಭಟ್ ಬಂಧಿಸಿದ್ದರು. ತ್ರಿವಳಿ ಕೊಲೆಗೆ ರೀನಾ ಹಾಗೂ ಪ್ರವೀಣ್ ಭಟ್ ನಡುವಿನ ಅನೈತಿಕ ಸಂಬಂಧವೇ ಕಾರಣವಾಗಿತ್ತು.

ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರವೀಣ್ ಒಬ್ಬನೇ ತಾಯಿ ಮತ್ತು ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಸಂಗತಿ ತನಿಖೆ ವೇಳೆ ಬಹಿರಂಗಗೊಂಡಿತ್ತು. ಉತ್ತರ ಕನ್ನಡ ಜಿಲ್ಲೆಯ ಮೂಲದ ಪ್ರವೀಣ್ ತನ್ನ ಪಾಲಕರೊಂದಿಗೆ ಕಳೆದ ಹಲವು ವರ್ಷಗಳಿಂದ ಬೆಳಗಾವಿಯ ಕುವೆಂಪು ನಗರದಲ್ಲಿ ವಾಸವಾಗಿದ್ದನು. ಕೊಲೆ ಮಾಡುವ ಮುಂಚಿತವಾಗಿ ಒಂದು ವರ್ಷದ ಹಿಂದೆ ರೀನಾ ಹಾಗೂ ಪ್ರವೀಣ್ ನಡುವೆ ಸ್ನೇಹ ಅಂಕುರಿಸಿತ್ತು. ಜವಳಿ ವ್ಯಾಪಾರಿಯಾಗಿದ್ದ ರಿತೇಶ ಮಾಲಗತ್ತಿ, ಉದ್ಯಮದ ಸಂಬಂಧ ಕೆಲವೊಮ್ಮೆ ಎರಡ್ಮೂರು ದಿನ ಮನೆಗೆ ಬರುತ್ತಿರಲಿಲ್ಲ.

ಈ ವೇಳೆ ರೀನಾ ಮಾಲಗತ್ತಿ ಪ್ರವೀಣ್‍ನನ್ನು ಮನೆಗೆ ಆಹ್ವಾನಿಸಿ, ಅನೈತಿಕ ಚುಟುವಟಿಕೆಗೆ ಸಹಕರಿಸುವಂತೆ ಒತ್ತಾಯಿಸುತ್ತಿದ್ದಳು. ರಿತೇಶ ಮನೆಯಲ್ಲಿ ಇಲ್ಲದ ಸಮಯದಲ್ಲಿ ಹಲವು ಸಲ ರೀನಾ ಭೇಟಿಗೆ ಮನೆಗೆ ಹೋಗುತ್ತಿದ್ದ ಪ್ರವೀಣ್ ಒಮ್ಮೆಯೂ ಮುಂಬಾಗಿಲಿನಿಂದ ಹೋಗಿಲ್ಲ. ಹಗ್ಗ ಏರಿ ಹೋಗಿಯೇ ರೀನಾನನ್ನು ಭೇಟಿ ಆಗುತ್ತಿದ್ದನು. ಹತ್ಯೆ ಘಟನೆ ನಡೆದ ದಿನ ರಾತ್ರಿ ಎರಡು ಸಲ ಪ್ರವೀಣ್ ರೀನಾ ಮನೆಗೆ ಹೋಗಿದ್ದನು ಎಂಬ ಮಾಹಿತಿ ಪೆÇಲೀಸ್ ತನಿಖೆಯಿಂದ ದೃಢಪಟ್ಟಿತ್ತು.

2015 ಆ. 16ರಂದು ಬೆಳಗಿನ ಜಾವ ನಡೆದ ತ್ರಿವಳಿ ಕೊಲೆ ಪ್ರಕರಣದ ಸಂಬಂಧ ಪ್ರವೀಣ್ ಭಟ್‍ನನ್ನು ಬಂಧಿಸಿ, ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲಾಗಿತ್ತು. ಆದರೆ ಕೂಲಂಕುಶವಾಗಿ ಪರಿಶೀಲನೆ ನಡೆಸಿದ ಧಾರವಾಡ ಹೈಕೋರ್ಟ್ ತ್ರಿವಳಿ ಕೊಲೆ ಆರೋಪಿ ಪ್ರವೀಣ್ ಭಟ್‍ರನ್ನು ನಿರ್ದೋಷಿ ಎಂದು ಆದೇಶ ಹೊರಡಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: