ಘಟಪ್ರಭಾ ಬಾಲಕನ ಸಾಧನೆ; ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲು

ಘಟಪ್ರಭಾ: ಮನೆಯೇ ಮೊದಲ ಪಾಠ ಶಾಲೆ ‘ ಎಂಬಂತೆ ಶಾಲೆಗೆ ತೆರಳುವ ಮೊದಲೇ ನಾನಾ ವಿಷಯಗಳನ್ನು ಅರಿತ 4 ವರ್ಷ 8 ತಿಂಗಳ ಬಾಲಕ ತನ್ನ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಿಸಿದ್ದಾನೆ.
ಮಲ್ಲಾಪುರ ಪಿ.ಜಿಯ ಶಂಕರಲಿಂಗ ಮತ್ತು ಲಕ್ಷ್ಮೀ ಅಂತರಗಂಗಿ ದಂಪತಿಯ ಪುತ್ರ ನಂದನ ಈ ಸಾಧನೆ ಮಾಡಿದ ಬಾಲಕ , 30 ಪ್ರಾಣಿಗಳ ಹೆಸರು , 23 ರಾಷ್ಟ್ರೀಯ ಚಿಹ್ನೆಗಳು , 1 ರಿಂದ 1000 ಸಂಖ್ಯೆ ಓದುವುದು ಮತ್ತು ಬರೆಯುವುದು, 20 ಸಾಕು ಪ್ರಾಣಿ ಮತ್ತು 20 ಕಾಡು ಪ್ರಾಣಿಗಳ ಬಗ್ಗೆ ಹೇಳುವುದು , 30 ಸಂಕಲನ ಮತ್ತು 32 ವ್ಯವಕಲನ ಲೆಕ್ಕ , 8 ಗಾದೆ ಮಾತುಗಳು , 100 ರಿಂದ 1 ರ ತನಕ ಬ್ಯಾಕ್ ವರ್ಡ್ ಕ್ರಮದಲ್ಲಿ ಹೇಳುವುದು , 20 ಇಂಗ್ಲಿಷ್ ಪ್ರಾಸಗಳನ್ನು ಹೇಳಿದ ಬಾಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದಾನೆ.
ತಾಯಿ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಈ ಎಲ್ಲ ಸಂಗತಿಗಳನ್ನು ಪುತ್ರನಿಗೆ ತಿಳಿಸಿಕೊಟ್ಟಿದ್ದಾರೆ. ಬಾಲಕನ ತಂದೆ ಘಟಪ್ರಭಾದಲ್ಲಿ ಸಿಮೆಂಟ್ ವ್ಯಾಪಾರಿ.