Crime News
BREAKING NEWS: ಮಂಗಳೂರಿನಲ್ಲಿ ಮೂರು ಮಕ್ಕಳನ್ನು ಕೊಂದು ಪತ್ನಿ ಜೊತೆ ಪತಿ ಆತ್ಮಹತ್ಯೆಗೆ ಯತ್ನ

ದಕ್ಷಿಣ ಕನ್ನಡ: ಜಿಲ್ಲೆಯ ಮಂಗಳೂರು ತಾಲೂಕಿನ ಪದ್ಮನೂರು ಗ್ರಾಮದಲ್ಲಿ ಮೂರು ಮಕ್ಕಳನ್ನು ಕೊಂದು ಪತ್ನಿ ಜೊತೆ ಪತಿ ಆತ್ಮಹತ್ಯೆಗೆ ಯತ್ನಿಸಿರುವ ಬೆಚ್ಚಿ ಬೀಳಿಸೋ ಘಟನೆ ನಡೆದಿದೆ.
ಮಂಗಳೂರು ತಾಲೂಕಿನ ಪದ್ಮನೂರು ಗ್ರಾಮದಲ್ಲಿ ವಿಜೇತ್ ಶೆಟ್ಟಿಗಾರ್ ಎಂಬಾತ, ತನ್ನ ಮೂವರು ಮಕ್ಕಳಾದಂತ ರಶ್ಮಿತಾ (14), ಉದಯ್ (11) ಮತ್ತು ದಕ್ಷಿತ್ (4) ಎಂಬುವರನ್ನು ಬಾವಿಗೆ ತಳ್ಳಿ ಹತ್ಯೆಗೈದಿದ್ದಾನೆ.
ಈ ಬಳಿಕ ಪತ್ನಿಯನ್ನು ಕರೆದುಕೊಂಡು, ಬಾವಿಗೆ ತಳ್ಳಿ ಆತ್ಮಹತ್ಯೆಗೆ ಯತ್ನಿಸಿದ ವೇಳೆಯಲ್ಲಿ ಗ್ರಾಮಸ್ಥರು ಕಂಡು ಗಂಡ-ಹೆಂಡತಿಯನ್ನು ರಕ್ಷಿಸಿದ್ದಾರೆ. ಆದ್ರೇ ಈ ಮೊದಲೇ ಬಾವಿಗೆ ತಂದೆ ವಿಜೇತ್ ಶೆಟ್ಟಿಗಾರ್ ತಳ್ಳಿದ್ದರಿಂದ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಇನ್ನೂ ಈ ವಿಷಯ ತಿಳಿಯುತ್ತಿದ್ದಂತ ಮಂಗಳೂರು ಉತ್ತರ ಎಸಿಪಿ ಮಹೇಶ್ ಕುಮಾರ್ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.