Karnataka News
Trending
ಮಾಹಿತಿ ಹಕ್ಕು ಕಾಯ್ದೆ ಕೇಸ್ ನಲ್ಲಿ ಪಿಡಿಓ ಅಧಿಕಾರಿಗೆ ಅಮಾನತು ಇದರಿಂದಾಗಿ ಅಧಿಕಾರಿಗಳಿಗೆ ಎದೆಯಲ್ಲಿ ನಡುಕ ಶುರು ವಾಗಿದೆ

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಪ್ರಕರಣದಲ್ಲಿ ಮಾಹಿತಿ ನೀಡಿದ ಕಾರಣಕ್ಕೆ ಕರ್ತವ್ಯ ಲೋಪದ ಎಸಗಿರುವ ಆರೋಪದ ಮೇಲೆ ಪಿಡಿಓ ಅಧಿಕಾರಿ ತುಳಸಿನಾಥ್ ನನ್ನು ಅಧಿಕಾರದಿಂದ ಅಮಾನತು ಮಾಡಲಾಗಿದೆ.
ಇಲ್ಲಿನ ಹೆನ್ನಾಗರ ಗ್ರಾಮದ ವೀರಭದ್ರಸ್ವಾಮಿ ಎಂಬವರು ಮಾಹಿತಿ ಹಕ್ಕು ಮೂಲಕ ಮಾಹಿತಿಯನ್ನು ಪಿಡಿಓ ತುಳಸಿನಾಥ್ ಗೆ ಕೇಳಿದ್ದರು.. ಅದರೆ ಮಾಹಿತಿ ನೀಡಿದೆ ಬೇಜವಾಬ್ದಾರಿಯಾಗಿ ನಿರ್ಲಕ್ಷ್ಯ ತೊರಿದ ಕಾರಣಕ್ಕೆ ರಾಜ್ಯ ಮಾಹಿತಿ ಆಯುಕ್ತರು ಎಚ್. ಪಿ. ಸುಧಾಮ್ ದಾಸ್ ರವರ ಪಿಡಿಓ ತುಳಿಸಿನಾಥ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರ ಇದರಿಂದಾಗಿ ಅಧಿಕಾರಿಗಳಿಗೆ ಎದೆಯಲ್ಲಿ ನಡುಕ ಶುರು ವಾಗಿದೆ