Google search: ಮದುವೆಯಾದ ಮಹಿಳೆಯರು ಗೂಗಲ್ನಲ್ಲಿ ಈ ಸಂಗತಿಯನ್ನು ಹೆಚ್ಚಾಗಿ ಹುಡುಕುತ್ತಾರಂತೆ!

ಗೂಗಲ್ನಲ್ಲಿ ಎಲ್ಲಾ ವಿಚಾರವು ದೊರಕುತ್ತದೆ.
ಯಾವುದಾದರು ವಿಷಯದ ಬಗ್ಗೆ ತಿಳಿಯದೇ ಇದ್ದರೆ ಗೂಗಲ್ ಮೊರೆ ಹೋಗುತ್ತೇವೆ. ನಮ್ಮ ಮನಸ್ಸಿನಲ್ಲಿ ಸುಳಿಯುವ ಪ್ರತಿಯೊಂದು ಪ್ರಶ್ನೆಗೂ ಗೂಗಲ್ ಉತ್ತರವನ್ನು ಹೊಂದಿದೆ.
ಅಂದಹಾಗೆಯೇ ವಿವಾಹಿತ ಮಹಿಳೆಯರು ಗೂಗಲ್ನಲ್ಲಿ ಹೆಚ್ಚು ಹುಡುಕಾಡುತ್ತಿರುತ್ತಾರೆ ಎಂದು ಇತ್ತೀಚಿನ ಅಧ್ಯಯನವು ಹೇಳಿದೆ. ವಿವಾಹಿತ ಮಹಿಳೆಯರು ಗೂಗಲ್ನಲ್ಲಿ ಏನು ಹುಡುಕುತ್ತಾರೆ ಎಂಬುದರ ಬಗ್ಗೆ ತಿಳಿಯೋಣ.
ಗೂಗಲ್ನ ಡೇಟಾ ಪ್ರಕಾರ, ವಿವಾಹಿತ ಮಹಿಳೆಯರು ತಮ್ಮ ಪತಿ ಏನನ್ನು ಇಷ್ಟಪಡುತ್ತಾರೆ ಎಂಬುದನ್ನು ಕಂಡುಹಿಡಿಯುವುದು ಹೇಗೆ ಎಂದು ಹೆಚ್ಚು ಹುಡುಕಾಡುತ್ತಿರುತ್ತಾರೆ. ಅವರ ಆಯ್ಕೆಗಳು ಯಾವುವು ಮತ್ತು ಅವರು ಏನು ಇಷ್ಟಪಡುತ್ತಾರೆ ಮತ್ತು ಇಷ್ಟಪಡುವುದಿಲ್ಲ ತಿಳಿದುಕೊಳ್ಳುವ ಹಂಬಲ ಅವರಿಗಿರುತ್ತದೆ.
ಈ ಪ್ರಶ್ನೆಗಳು ಅವರ ಕಡೆಯಿಂದ ಸಾಕಷ್ಟು ಸಾಮಾನ್ಯವಾಗಿದೆ. ವಿವಾಹಿತ ಮಹಿಳೆಯರು ತಮ್ಮ ಗಂಡನ ಹೃದಯವನ್ನು ಹೇಗೆ ಗೆಲ್ಲಬಹುದು, ಅವರನ್ನು ಹೇಗೆ ಸಂತೋಷಪಡಿಸಬಹುದು ಎಂಬ ಪ್ರಶ್ನೆಯನ್ನು ಗೂಗಲ್ನಲ್ಲಿ ಸಾಕಷ್ಟು ಬಾರಿ ಹುಡುಕಾಡಿದ್ದಾರೆ.
ವಿವಾಹಿತ ಮಹಿಳೆಯರು ತಮ್ಮ ಪತಿಯನ್ನು ಹೇಗೆ ತಮ್ಮ ಮುಷ್ಟಿಯಲ್ಲಿಟ್ಟುಕೊಳ್ಳಬೇಕು, ಅವರನ್ನು ಆ ರೀತಿ ಮಾಡುವ ದಾರಿಯನ್ನು ಗೂಗಲ್ನಲ್ಲಿ ಹುಡುಕಾಡುತ್ತಾರೆ. ಹೆಂಡತಿಯರು ತಮ್ಮ ಕುಟುಂಬವನ್ನು ವಿಸ್ತರಿಸುವ ನಿರ್ಧಾರವನ್ನು ಯಾವಾಗ ತೆಗೆದುಕೊಳ್ಳಬೇಕು ಮತ್ತು ಮಗುವನ್ನು ಹೊಂದಲು ಸರಿಯಾದ ಸಮಯ ಯಾವುದು ಎಂದು ತಿಳಿಯಲು ಬಯಸುತ್ತಾರೆ.
ಮಹಿಳೆಯರು ಮದುವೆಯ ನಂತರ ತಮ್ಮ ಹೊಸ ಸಂಸಾರದಲ್ಲಿ ಹೇಗೆ ನಡೆದುಕೊಳ್ಳಬೇಕು, ಆ ಕುಟುಂಬದ ಭಾಗವಾಗುವುದು ಹೇಗೆ?, ಅತ್ತೆ-ಮಾವಂದಿರೊಂದಿಗೆ ಸಂತೋಷದಲ್ಲಿರುವುದು ಹೇಗೆ ಎಂದು ಗೂಗಲ್ನಲ್ಲಿ ಹುಡುಕಾಡುತ್ತಾರೆ.
ಜೊತೆಗೆ ನಿಮ್ಮ ಕುಟುಂಬದ ಜವಾಬ್ದಾರಿಯನ್ನು ಹೇಗೆ ನೋಡಿಕೊಳ್ಳುವುದು. ಮದುವೆಯ ನಂತರ ಸ್ವಂತ ವ್ಯಾಪಾರವನ್ನು ಹೇಗೆ ನಡೆಸಬೇಕು ಮತ್ತು ಕುಟುಂಬವು ವ್ಯವಹಾರವನ್ನು ಹೇಗೆ ನಿರ್ವಹಿಸಬೇಕು ಎಂದು ತಿಳಿಯಲು ಬಯಸುತ್ತಾರೆ.