Crime NewsKarnataka News
ಕಾರು-ಬೈಕ್ ಡಿಕ್ಕಿ; ಮೂರು ವರ್ಷದ ಮಗು, 16 ವರ್ಷದ ಬಾಲಕಿ ಸಾವು

ಬಾಗಲಕೋಟೆ: ಚಲಿಸುತ್ತಿದ್ದ ಬೈಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದ ಮಹಾವೀರ ಶಾಲೆಯ ಸಮೀಪ ನಡೆದಿದೆ.
ಭಾಗ್ಯಶ್ರೀ ಕಿದರಾಪೂರ (16), ತನುಶ್ರೀ (3) ಮೃತ ದುರ್ದೈವಿಗಳು.
ಬೈಕ್ ಗೆ ಹಿಂಬದಿಯಿಂದ ಕಾರು ಗುದ್ದಿದ್ದು, ಬೈಕ್ ಮೇಲಿದ್ದ ಮೂರು ವರ್ಷದ ಮಗು ಹಾಗೂ 16 ವರ್ಷದ ಬಾಲಕಿ ಸಾವನ್ನಪ್ಪಿದ್ದಾರೆ.
ಜಮಖಂಡಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.