ಬೆಳಗಾವಿ ಸೇರಿದಂತೆ ಜಿಲ್ಲೆಯಾದ್ಯಂತ ಮಳೆರಾಯನ ಆಗಮನ

ಬೆಳಗಾವಿ ಸಿಟಿ ಸೇರಿದಂತೆ ಜಿಲ್ಲೆಯಾದ್ಯಂತ ಮಳೆರಾಯನ
ಆಗಮನವಾಗಿದೆ.ಮದ್ಯರಾತ್ರಿಯಿಂದಲೇ ಬಿಡುವಿಲ್ಲದೇ ಜಿಟಿ ಜಿಟಿ ಮಳೆ ಸುರಿಯುತ್ತಲೇ ಇದೆ.
ಇದಕ್ಕೂ ಮೊದಲು ಆಗೊಮ್ಮೆ ಈಗೊಮ್ಮೆ ಮಳೆ ಸುರಿದು ಮೋಡಗಳು ಮಾಯವಾಗಿ ಬಿಸುಲು ಬೀಳುವ ಆಟ ನಡೆಯುತ್ತಿತ್ತು ಆದ್ರೆ ನಿನ್ನೆ ರಾತ್ರಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಪಕ್ಕಾ ಮಾನ್ಸೂನ್ ಸುರಿಯುತ್ತಿದೆ.
ಸರಿಯಾಗಿ ಮಳೆ ಬಾರದ ಕಾರಣ ಬಿತ್ತನೆ ಕಾರ್ಯವೂ ಮುಗಿದಿಲ್ಲ ಆದ್ರೆ ಈಗ ಸುರಿಯುತ್ತಿರುವ ಮಳೆ ನೋಡಿದ್ರೆ ಇನ್ಮುಂದೆ ಎಲ್ಲ ಕೃಷಿ ಚಟುವಟಿಕೆಗಳು ಸುಗಮವಾಗಿ ಸಾಗಲಿವೆ.
ಬೆಳಗಾವಿ ಮಹಾನಗರದಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು ಮನೆಯಲ್ಲಿ ಅಡಗಿದ್ದ ಛತ್ರಿ ರೇನ್ ಕೋಟ್ ಗಳು ಈಗ ಹೊರ ಬಂದಿವೆ.ಶಾಲಾ ಮಕ್ಕಳು ಛತ್ರಿ ಹಿಡ್ಕೊಂಡು ಶಾಲೆಗಳತ್ತ ಮುಖ ಮಾಡಿದ್ದು, ರಸ್ತೆಗಳು ಹೊಂಡದ ಸ್ವರೂಪ ಪಡೆದುಕೊಳ್ಳುವ ಸಮಯ ಈಗ ಹತ್ತಿರವಾಗಿದೆ.
ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಬಿಡುವಿಲ್ಲದೇ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪಕ್ಕದ ಮಹಾರಾಷ್ಟ್ರದಲ್ಲೂ ಮಳೆ ಜೋರಾಗಿದೆ.ಕೃಷ್ಣ ಘಟಪ್ರಭಾ ಮಲಪ್ರಭಾ ಸೇರಿದಂತೆ ಜಿಲ್ಲೆಯ ನದಿಗಳ ಒಳ ಹರಿವು ಶುರುವಾಗಿದೆ. ಒಟ್ಟಾರ ಬೆಳಗಾವಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಪಕ್ಕಾ ಮಳೆಗಾಲ ಆರಂಭವಾಗಿದೆ.
ಮಿರಗ ಮಳೆ ಶುರುವಾದ್ರೆ, ಉತ್ತರ ಕರ್ನಾಟಕದಲ್ಲಿ ನಾಟಿ ಕೋಳಿ ಸಾರು ಸವಿಯುವ ಪದ್ಧತಿ ಇದೆ.ಹೀಗಾಗಿ ಈ ಹೊತ್ತಿನಲ್ಲಿ ನಾಟಿ ಕೋಳಿಗಳಿಗೆ ಫುಲ್ ಡಿಮ್ಯಾಂಡು…..!!!!