National
ಗೋವಾದ ಅಂಜುನಾ ಬೀಚ್‌ನಲ್ಲಿ ಯದ್ವಾತದ್ವಾ ಕಾರು ಓಡಿಸಿದ್ದವನು ʼಅಂದರ್ʼ

ಗೋವಾದ ಅಂಜುನಾ ಬೀಚ್‌ನಲ್ಲಿ ಎಸ್ ಯು ವಿ ಯಲ್ಲಿ ಕುಳಿತು ಶೋಕಿ ಮಾಡುತ್ತಾ ನಾಯಿಯನ್ನು ಗೋಳಾಡಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಮುದ್ರ ತೀರದ ನೀರಿನ ಮೇಲೆ ವಾಹನವನ್ನು ಓಡಿಸುವ ಮತ್ತು ಅಲ್ಲೇ ಇದ್ದ ನಾಯಿಗೆ ಸುತ್ತುಬಂದು ಕಾಡುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಹೀಗೆ ಓಡಾಡುವ ಕಾರು ಮರಳಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತದೆ. ಅದನ್ನು ಎಳೆಯಲು ಪ್ರಯತ್ನಿಸುತ್ತಿರುವುದು ಮತ್ತು ಸಹಾಯ ಯಾಚಿಸುವುದು ವಿಡಿಯೋದಲ್ಲಿ ಕಂಡುಬರುತ್ತದೆ. ನೆಟ್ಟಿಗರು ಆತನನ್ನು ಹಿಗ್ಗಾಮುಗ್ಗಾ ಝಾಡಿಸಿದ್ದಾರೆ.
ಈಗ ದೆಹಲಿ ಮೂಲದ ಲಲಿತ್ ಕುಮಾರ್ ದಯಾಳ್ ಎಂಬ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಗೋವಾದಲ್ಲಿ ನೋಂದಾಯಿತ ಹ್ಯುಂಡೈ ಕ್ರೆಟಾ ಕಾರನ್ನು ಪ್ರವಾಸಿಗರು ಸಮುದ್ರ ತಟದಲ್ಲಿ ಓಡಿಸುತ್ತಿದ್ದರು. ಜೂನ್ 16ರಂದು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉಪ ಪೊಲೀಸ್ ಅಧೀಕ್ಷಕ ತಿಳಿಸಿದ್ದಾರೆ.