ಪೌರ ಕಾರ್ಮಿಕರ ಮತ್ತು ಹೊರಗುತ್ತಿಗೆ ವಾಹನ ಚಾಲಕರ ಮೇಲಾಗುತ್ತಿರುವ ದೌರ್ಜನ್ಯ ವಂಚನೆ ಕುರಿತು ಮುಖ್ಯ ಬೆಳಗಾವಿ ಕಾರ್ಮಿಕ ನಿರೀಕ್ಷಕರಿಗೆ ಮನವಿ.

ಸ್ಲಗ್: ಗೋಕಾಕ್ ತಾಲೂಕಿನ ಕೊಣ್ಣೂರ ಪುರಸಭೆಯಯಲ್ಲಿ ಪೌರ ಕಾರ್ಮಿಕರ ಮತ್ತು ಹೊರಗುತ್ತಿಗೆ ವಾಹನ ಚಾಲಕರ ಮೇಲಾಗುತ್ತಿರುವ ದೌರ್ಜನ್ಯ ವಂಚನೆ ಕುರಿತು ಮುಖ್ಯ ಬೆಳಗಾವಿ ಕಾರ್ಮಿಕ ನಿರೀಕ್ಷಕರಿಗೆ ಮನವಿ.
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದ ಗೋಕಾಕ ತಾಲೂಕಿನ ಕೊಣ್ಣೂರ ಪುರಸಭೆಯಲ್ಲಿ ಸುಮಾರು ಎಳು ಎಂಟು ವರ್ಷಗಳಿಂದ ವಾಹನ ಚಾಲಕರು ಕಾರ್ಯ ನಿರ್ವಹಿಸುತ್ತಿದ್ದು ಈಗ ಅವರ ಮೇಲೆ ಇದೇ ಪುರಸಭೆಯಲ್ಲಿ ಹೊರಗುತ್ತಿಗೆದಾರದ ಶ್ರೀಮತಿ ಶೋಭಾ ಎಲ್ಲಪ್ಪಾ ಹಾದಿಮನಿ ಇವರು ಈ ಕಾರ್ಮಿಕರ ಮೇಲೆ ದೌರ್ಜನ್ಯ ತೋರುತ್ತಿದ್ದಾರೆ.
ಸರಕಾರ ನಿಗದಿಪಡಿಸಿದ ಕನಿಷ್ಠ ವೇತನದಲ್ಲಿ ಹಾಗೂ E s i ಮತ್ತು p f ಪ್ರತಿತಿಂಗಳು ಕಟ್ಟಾಆಗಿ ಪ್ರತಿಯೊಬ್ಬರ ಬ್ಯಾಂಕ ಖಾತೆಗೆ 13500 ರೂಪಾಯಿಗಳು ಜಮಾ ಆಗುತ್ತವೆ ಆದರೆ ಹೊರಗುತ್ತಿಗೆದಾರರ ವಂಚನೆ ಹಾಗೂ ದೌರ್ಜನ್ಯದಿಂದ ಬಡ ಕಾರ್ಮಿಕರಿಗೆ ತಿಂಗಳಿಗೆ ಏಳರಿಂದ ಎಂಟು ಸಾವಿರ ಮಾತ್ರ ಸಿಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಈ ಕಾರ್ಮಿಕರ ಗೋಳು ಕೇಳುವವರು ಯಾರು ಎನ್ನುವ ಪ್ರಶ್ನೆ ಕಾಡುತ್ತಿದೆ.
ಈ ಸಂದರ್ಭದಲ್ಲಿ ಯುವ ದಲಿತ ಮುಖಂಡ ಈಶ್ವರ ಗುಡಜ ಮಾತನಾಡಿ ಹೊರಗುತ್ತಿಗೆದಾರರ ಶೋಭಾ ಇವರ ಮಗನಾದ ಶಿವಾನಂದ ಯಲ್ಲಪ್ಪ ಹಾದಿಮನಿ ಈತನು ಈ ಪುರಸಭೆಯಲ್ಲಿ ಒಬ್ಬ ಕಾರ್ಮಿಕನಾಗಿದ್ದು ಹೊರಗುತ್ತಿಗೆ ಕಾರ್ಮಿಕರ ಮೇಲೆ ದಬ್ಬಾಳಿಕೆ ದರ್ಪದಿಂದ ದಿನಕ್ಕೆ 10 ರಿಂದ 12 ಗಂಟೆಗಳ ಕಾಲ ಕೆಲಸ ಮಾಡಿಸಿಕೊಳ್ಳುತ್ತಾನೆ ಮತ್ತು ಕಾರ್ಮಿಕರ ಖಾತೆಗೆ ಜಮಾ ಆದ ವೇತನವನ್ನು ಬ್ಯಾಂಕಿಗೆ ಬಂದು ವಿತ್ಡ್ರಾಲ ಮೇಲೆ ಸಹಿ ಮಾಡಿಸಿಕೊಳ್ಳುತ್ತಾನೆ ಕಾರ್ಮಿಕರನ್ನು ಹೆಸರಿಸಿ ಎಲ್ಲ ವೇತನವನ್ನು ತೆಗೆದುಕೊಂಡು ಪೂರ ಕಾರ್ಮಿಕರನ್ನು ಮನೆಗೆ ಕರೆಸಿಕೊಂಡು ಅವರು ಹೆದರಿಸಿ ಬೆದರಿಸಿ ಕೇವಲ ತಿಂಗಳಿಗೆ ಏಳ ರಿಂದ ಎಂಟು ಸಾವಿರ ಮಾತ್ರ ವೇತನವನ್ನು ಕೈಯಲ್ಲಿ ಕೊಟ್ಟು ಕಳಿಸುತ್ತಾನೆ. ಇದನ್ನು ಮರಳಿ ಕೇಳಿದರೆ ನಾಳಿಯಿಂದ ಕೆಲಸಕ್ಕೆ ಬರಬೇಡಿ ಎಂದು ಹೆದರಿಸುತ್ತಾನೆ ಇದು ಬಡ ಕಾರ್ಮಿಕರ ಮೇಲೆ ಆಗುತ್ತಿರುವ ದೌರ್ಜನ್ಯ ವಂಚನೆ ಬಗ್ಗೆ ಮೇಲಾಧಿಕಾರಿಗಳು ಆದಷ್ಟು ಬೇಗ ಪರಿಶೀಲಿಸ ಹೊರಗುತ್ತಿಗೆ ದಾರ ಮೇಲೆ ಕ್ರಮ ಕೈಗೊಂಡು ಬಡ ಕಾರ್ಮಿಕರಿಗೆ ನ್ಯಾಯ ಸಿಗುವಂತೆ ಮಾಡಬೇಕು ಹೇಳಿದರು
ಈ ಮನವಿ ಕೊಡುವ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖ್ಯ ಕಛೇರಿ ಕೊಣ್ಣೂರ ಇವರಿಂದ ಬೆಳಗಾವಿ ಕಾರ್ಮಿಕ ಮುಖ್ಯ ನಿರ್ದೇಶಕರಾದ ಅನ್ಸ್ರಾರಿ ಇವರಿಗೆ ಮನವಿ ಹಸ್ತಂತ್ರಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ರಾಜ್ಯದಕ್ಷರು ಶ್ರೀಮತಿ ಮಂಜುಳಾ ಪರಶುರಾಮ ರಾಮನಗಾನಟ್ಟಿ, ದಲಿತ ಮುಖಂಡರಾದ ಮಹಾವೀರ, ಯುವ ದಲಿತ ಮುಖಂಡ ಈಶ್ವರ ಗುಡಜ ಇವರು ನಮ್ಮ ವಾಹಿನಿಯೊಂದಿಗೆ ಈ ಹೇಳಿಕೆಯನ್ನು ನೀಡಿದ್ದಾರೆ ಬನ್ನಿ ಕೇಳೋಣ. ಹಾಗೂ ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ರಾಜು ಮುಂಡೆ, ಪ್ರಶಾಂತ ಗಸ್ತಿ, ರವಿ ಕೊಟಬಾಗಿ, ರಘು ಐಹೊಳೆ, ಪ್ರವೀಣ ಪೂಜಾರಿ, ಪ್ರವೀಣ ಬುಡ್ಡಾಕಾಯಿ, ಪರಶುರಾಮ ರಾಮನಗಟ್ಟಿ, ಎ ಪಿ ತಳವಾರ, ಕೆಕೆ ಮಾದರ, ಎಸ್ ಎಸ್ ಕಾಂಬಳೆ, ಎಸ್ಎಸ್ ಬುಡ್ಡನಟ್ಟಿ ಇವರೆಲ್ಲರ ಉಪಸ್ಥಿತಿಯಲ್ಲಿ ಈ ಮನವಿ ಕೊಡುವ ಕಾರ್ಯ ನಡೆಯಿತು.