National
ಚಂಡೀಗಢದಲ್ಲಿ ಶಿವಲಿಂಗಕ್ಕೆ ಬಿಯರ್ ಅಭಿಷೇಕ ಮಾಡಿ ಯುವಕರು! ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಚಂಡೀಗಢ: ಶಿವಲಿಂಗದ ಬಳಿ ಶೂ ಧರಿಸಿಕೊಂಡೇ ಕುಳಿತ ಇಬ್ಬರು ಯುವಕರು, ಲಿಂಗಕ್ಕೆ ಬಿಯರ್‌ನಲ್ಲಿ ಅಭಿಷೇಕ ಮಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಚಂಡೀಗಢದ ಕಾಲುವೆಯ ಕಿನಾರೆಯ ಬಳಿ ಈ ಘಟನೆ ನಡೆದಿದೆ.
ಈ ರೀತಿ ಮಾಡಿರುವ ದುಷ್ಕರ್ಮಿಗಳ ವಿರುದ್ಧ ಬಜರಂಗ ದಳ ಮತ್ತು ಕೆಲವು ಹಿಂದೂಪರ ಸಂಘಟನೆಗಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿವೆ.
ಆರೋಪಿಗಳನ್ನು ಬಂಧಿಸಿ, ಕಠಿಣ ಕ್ರಮ ತೆಗೆದುಕೊಳ್ಳಬೇಕು, ಇಲ್ಲವಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಗಳು ಆಕ್ರೋಶ ಹೊರಹಾಕಿವೆ.