RPD ವೃತ್ತದಲ್ಲಿ ರಸ್ತೆ ಮೇಲೆ ಹರಿದ ಡ್ರೈನೇಜ್ ನೀರು: ಸಾರ್ವಜನಿಕರ ಆಕ್ರೋಶ..!!

ಬೆಳಗಾವಿಯ ನಗರದ ಆರ್‍ಪಿಡಿ ಸರ್ಕಲ್‍ನಲ್ಲಿ ಡ್ರೈನೇಜ್ ನೀರಿಗೆ ಮಳೆ ನೀರು ಸೇರಿ ರಸ್ತೆಯ ಮೇಲೆಯೇ ಹರಿಯುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೌದು ಬೆಳಗಾವಿ ನಗರದಲ್ಲಿ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ನಗರದ ಆರ್‍ಪಿಡಿ ಸರ್ಕಲ್ ಕೂಡ ಒಂದು. ಇಲ್ಲಿ ಒಳಚರಂಡಿ ಬ್ಲಾಕ್ ಆಗಿದ್ದು ಮಳೆಯ ನೀರೂ ಕೂಡ ಒಳ ಚರಂಡಿಗೆ ಸೇರುತ್ತಿದೆ. ಇದರಿಂದಾಗಿ ಒಳ ಚರಂಡಿಯ ಗಲೀಜು ನೀರು ರಸ್ತೆಯ ಮೇಲೆಲ್ಲಾ ಹರಿಯತ್ತಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.
ಇನ್ನು ಸಾರ್ವಜನಿಕರಿಗೆ ಇದರಿಂದ ಆರೋಗ್ಯ ತೊದರೆಯಾದರೆ ಯಾರು ಜವಾಬ್ದಾರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಮಾರ್ಗವಾಗಿ ಸಾಗುವ ಸಾರ್ವಜನಿಕರು ಪ್ರಾಣ ಕೈತ್ತಲ್ಲಿ ಹಿಡಿದುಕೊಂಡು ಸಾಗುತ್ತಿದ್ದಾರೆಇನ್ನು ಇಲ್ಲಿನ ಸಮಸ್ಯೆ ಕುರಿತಂತೆ ಮಾತನಾಡಿರುವ ಸ್ಥಳೀಯರು, ಆರ್‍ಪಿಡಿ ಸರ್ಕಲ್‍ನಲ್ಲಿ ಈ ರೀತಿ ತೊಂದರೆಯಾಗುತ್ತಿದೆ.
ಇಲ್ಲಿನ ಒಳಚರಂಡಿ ನೀರು ಮಳೆ ನೀರಿಗೆ ಸೇರಿ ರಸ್ತೆಯ ಮೇಲೆಲ್ಲಾ ಹರಿಯುತ್ತಿದೆ. ಇದರಿಂದ ಇಲ್ಲಿ ಓಡಾಡುವ ಜನರಿಗೆ ತೊಂದರೆಯಾಗುತ್ತಿದೆ. ಇನ್ನು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಯಾರು ಜವಾಬ್ದಾರಿ ಎಂದು ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಮನವಿ ಮಾಡಿದ್ದಾರೆ.
ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು ನಗರದ ಆರ್‍ಪಿಡಿ ಸರ್ಕಲ್‍ನಲ್ಲಿ ಒಳಚರಂಡಿ ಬ್ಲಾಕ್ ಆಗಿ ಒಳಚರಂಡಿ ನೀರು ಮಳೆಯ ನೀರಿನೊಂದಿಗೆ ಸೇರಿ ರಸ್ತೆಯ ಮೇಲೆ ಹರಿದು ಸಾರ್ವಜನಿಕರಿಗೆ ತೀವೃ ತೊಂದರೆಯಾಗುತ್ತಿದೆ. ಕೂಡಲೇ ಈ ಸಮಸ್ಯೆಯನ್ನು ಸರಿಪಡಿಸಬೇಕೆಂಬುದೇ ಸ್ಥಳೀಯರ ಆಗ್ರಹವಾಗಿದೆ