ಅನಿಲ ಬೆನಕೆ ಫೌಂಡೇಶನ್ ನೇತೃತ್ವದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ
ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ.

ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ.
ಕೆ ಎಲ್ ಇ ಸಂಶೋಧನಾ ಕೇಂದ್ರ, ಜೆ ಎನ್ ಮೇಡಿಕಲ್ ಕಾಲೇಜು ಹಾಗೂ ಶ್ರೀ ಅನಿಲ ಬೆನಕೆ ಫೌಂಡೇಶನ್ ಅವರ ನೇತೃತ್ವದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ರುಕ್ಮಿಣಿ ನಗರದಲ್ಲಿ ಆಯೋಜನೆ ಮಾಡಲಾಗಿತ್ತು.
ಶನಿವಾರ ರುಕ್ಮಿಣಿ ನಗರದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿತ್ತು. ನಗರ ಸೇವಕರು ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಬೆಳಗಾವಿ ಉತ್ತರ ಮತ ಕ್ಷೇತ್ರದಲ್ಲಿ ಒಟ್ಟು 14 ಸ್ಥಳಗಳಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜನೆ ಏರ್ಪಡಿಸಲಾಗಿದೆ. ಈಗ ಸದ್ಯ ರುಕ್ಮಿಣಿ ನಗದಲ್ಲಿ ಶಬಿರ ಆಯೋಜನೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಚವ್ಹಾಟ್ ಗಲ್ಲಿ, ಗಾಂಧಿ ನಗರ, ಶಿವಾಜಿ ನಗರ, ಫುಲ್ ಬಾಗ ಗಲ್ಲಿ, ಬಾಂದುರ ಗಲ್ಲಿ, ರಾಮತಿರ್ಥ ನಗರ, ಹನುಮಾನ ನಗರ, ವೈಭವ ನಗರ, ಸದಾಶಿವ ನಗರ ಹೀಗೆ ಉಚಿತ ಆರೋಗ್ಯ ಶಿಬಿರ ಆಯೋಜನೆ ಮಾಡಲಾಗುತ್ತದೆ. ಶಿಬಿರದಲ್ಲಿ ಉಚಿದ ಔಷಧೀ ವಿತರಣೆ ಮಾಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಕರೆ ನೀಡಿದರು.
ಈ ಶಿಬಿರದಲ್ಲಿ ತಜ್ಞ ವೈದ್ಯರು ವೈದ್ಯಕೀಯ ಶಸ್ತ್ರಚಿಕಿತ್ಸೆ, ಎಲುಬು, ಕೀಲು ಮತ್ತು ಮರುಜೋಡಣೆ, ಸ್ತ್ರೀರೋಗ, ಚಿಕ್ಕಮಕ್ಕಳ, ನೇತ್ರ ಚಿಕಿತ್ಸೆ, ಕಿವಿ, ಮೂಗು ಮತ್ತು ಗಂಟಲು, ಚರ್ಮರೋಗ, ಶ್ವಾಸಕೋಶ, ಹೃದಯ ರೋಗ, ಸರರೋಗ ಶಸ್ತ್ರಚಿಕಿತ್ಸೆ, ಮೂತ್ರಕೋಶ ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಗೆ ಉಚಿತ ತಪಾಸಣೆ ಮತ್ತು ಸಲಹೆಯನ್ನು ನೀಡಿದರು.
ಈ ವೇಳೆ ನಗರ ಸದಸ್ಯರಾರ ಶ್ರೀ ರಾಜು ಡೋಣಿ, ಶ್ರೀ ಶ್ರೇಯಸ್ಸ ನಾಕಾಡಿ, ಶ್ರೀ ಅಫಜಲ್ ಖಾನ ಪಠಾಣ, ಶ್ರೀ ಲಕ್ಷ್ಮೀ ನಾಯಕ, ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ರವಿ ಭಜಂತ್ರಿ, ರುಕ್ಮಿಣಿ ನಗರ ಸರಕಾರಿ ಶಾಲೆಯ ಪ್ರಾಚಾರ್ಯ ಶ್ರೀ ಆರ್.ಎಚ್.ಅಳವಣಿ, ಶ್ರೀ ತಾಜ್ ಶೇಕ್, ಶ್ರೀ ಶಿರಗುಪ್ಪಿ ಶೆಟ್ಟರ್, ಶ್ರೀ ಗೋಪಾಲ್ ಖಾಟಾವ್ಕರ್, ಶ್ರೀ ಬಸು ಅಂಚಿ, ಶ್ರೀ ಸವಿತಾ ಗುಡ್ಡಕಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.