Crime News
ದಲಿತ ಮುಖಂಡ’ ಬರ್ಬರ ಹತ್ಯೆ ಕೇಸ್ ; 13 ಆರೋಪಿಗಳು ಅಂದರ್

ತುಮಕೂರು : ಗುಬ್ಬಿ ದಲಿತ ಮುಖಂಡ ನರಸಿಂಹಮೂರ್ತಿ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ 13 ಆರೋಪಿಗಳನ್ನ ಬಂಧಿಸಲಾಗಿದೆ ಎಂದು ತುಮಕೂರು ಎಸ್‌ಪಿ ರಾಹುಲ್ ಶಹಾಪುರ್‌ವಾಡ್ ಹೇಳಿದ್ದಾರೆ.
ಅದ್ರಂತೆ, ಜೂನ್ 15ರಂದು ನಡೆದಿದ್ದ ಕೊಲೆ ಸಂಬಂಧ 13 ಆರೋಪಿಗಳನ್ನ ಬಂಧಿಸಲಾಗಿದ್ದು, ಕಿರಣ್, ರಾಜು ಅಲಿಯಾಸ್ ಕ್ಯಾಟ್ ರಾಜ, ನಯಾಜ್, ಕೀರ್ತಿ, ಮಂಜು ಅಲಿಯಾಸ್ ಮ್ಯಾಕ್ಸಿ, ಅಭಿಷೇಕ್ ಅಲಿಯಾಸ್ ಕರೀಮ್, ವೆಂಕಟೇಶ್, ಚಂದ್ರಶೇಖರ್, ಭರತ್, ಧೀರಜ್, ಬಸವರಾಜು ಹಾಗೂ ನಾಗರಾಜು ಅನ್ನೋ ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ.
ಅಂದ್ಹಾಗೆ, ಗುಬ್ಬಿ ದಲಿತ ಮುಖಂಡ ನರಸಿಂಹ ಮೂರ್ತಿ ಮತ್ತು ಆರೋಪಿ ಕಿರಣ್ ಪರಸ್ಪರ ಪರಿಚಯಸ್ಥರಾಗಿದ್ದು, ಕೆಲ ತಿಂಗಳ ಹಿಂದೆ ಬೇರೆಯಾಗಿ ಪರಸ್ಪರ ದ್ವೇಷ ಬೆಳೆಸಿಕೊಂಡಿದ್ರು. ಭೂ ವಿವಾದ ಹಾಗೂ ಹಣದ ವಿಚಾರಕ್ಕಾಗಿ ಕೊಲೆಗೈದಿರುವ ಮಾಹಿತಿ ಸಿಕ್ಕಿದೆ.