Karnataka News
ಬೆಳಗಾವಿ: ಬೆಳಂಬೆಳಿಗ್ಗೆ ಭೀಕರ ಅಪಘಾತ, ಕ್ರೂಸರ್ ಪಲ್ಟಿಯಾಗಿ ಸ್ಥಳದಲ್ಲೇ 11 ಕಾರ್ಮಿಕರ ದಾರುಣ ಸಾವು ದುರ್ಮರಣ

ಬೆಳಗಾವಿ: ಬೆಳಗಾವಿ ಬಳಿ ಬೆಳಂಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದೆ. ಕ್ರೂಸರ್ ಪಲ್ಟಿಯಾಗಿ ಏಳು ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಣಬರಗಿ ಸಮೀಪ ಈ ದುರ್ಘಟನೆ ಸಂಭವಿಸಿದೆ.
ಚಾಲಕನ ನಿಯಂತ್ರಣ ತಪ್ಪಿದ ಕ್ರೂಸರ್ ಪಲ್ಟಿಯಾಗಿ ರಸ್ತೆಯಿಂದ ಸುಮಾರು ಅಡಿಗಳಷ್ಟು ದೂರ ಸಾಗಿ ಬಳ್ಳಾರಿ ನಾಲೆಗೆ ಬಿದಿದ್ದೆ.
ಇದರಿಂದಾಗಿ ಏಳು ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಇನ್ನೂ ಮೂವರು ಸ್ಥಿತಿ ಚಿಂತಾಜನಕವಾಗಿದೆ. ಇವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.
ಕ್ರೂಸರ್ ಗೋಕಾಕ್ ನಿಂದ ಬೆಳಗಾವಿಗೆ ತೆರಳುತಿತ್ತು. ಮೃತರೆಲ್ಲರೂ ರೈಲ್ವೆ ಇಲಾಖೆಯಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ದುರಂತ ಸ್ಥಳಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.