ನಾಳೆಯಿಂದ SSLC ಪೂರಕ ಪರೀಕ್ಷೆ ಪ್ರಾರಂಭ; ಕೋವಿಡ್ ನಿಯಮ ಪಾಲನೆ ಕಡ್ಡಾಯ

ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಹೀಗಿದೆ
ಜೂನ್ 27- ವಿಜ್ಞಾನ, ರಾಜ್ಯಶಾಸ್ತ್ರ ಕರ್ನಾಟಕ ಸಂಗೀತ/ಹಿಂದೂಸ್ಥಾನಿ ಸಂಗೀತ
ಜೂನ್ 28- ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ಉರ್ದು, ಇಂಗ್ಲಿಷ್, ಸಂಸ್ಕೃತ)
ಜೂನ್ 29- ದ್ವಿತೀಯ ಭಾಷೆ (ಇಂಗ್ಲಿಷ್-ಕನ್ನಡ)
ಜೂನ್ 30- ಸಮಾಜ ವಿಜ್ಞಾನ
ಜುಲೈ 1- ತೃತೀಯ ಭಾಷೆ (ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು) ಎನ್ ಎಸ್, ಕ್ಯೂ, ಎಫ್ ಪರೀಕ್ಷಾ ವಿಷಯಗಳು (ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟ್ ಅಂಡ್ ವೆಲ್ ನೆಸ್)
ಜುಲೈ -2 ಎಲಿಮೆಂಟ್‌ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಲ್ ಇಂಜಿನಿಯರಿಂಗ್-2, ಇಂಜಿನಿಯರಿಂಗ್ ಗ್ರಾಫಿಕ್ಸ್-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ
ಜುಲೈ-4 ಗಣಿತ, ಸಮಾಜಶಾಸ್ತ್ರ
ವೇಳಾಪಟ್ಟಿ
ಪರೀಕ್ಷಾ ಕೇಂದ್ರದಲ್ಲಿ ಪಾಲಿಸಬೇಕಾದ ಕೋವಿಡ್ ನಿಯಂತ್ರಣ ಕ್ರಮಗಳು
*ಪ್ರತಿ ಪರೀಕ್ಷಾ ಕೇಂದ್ರವನ್ನು ಪರೀಕ್ಷೆಗೆ ಮುನ್ನ ಮತ್ತು ನಂತರ ಸ್ಯಾನಿಟೈಸ್ ಮಾಡುವುದು
*ಪರೀಕ್ಷಾ ಕೊಠಡಿಯ ಎಲ್ಲಾ ಪೀಠೋಪಕರಣ ಸ್ಯಾನಿಟೈಸ್ ಮಾಡುವುದು
*ದೈಹಿಕ ಅಂತರ ಕಾಪಾಡುವುದು
*ಪ್ರತಿ ಕೊಠಡಿಯಲ್ಲಿ ಗರಿಷ್ಠ 20 ವಿದ್ಯಾರ್ಥಿಗಳಿರಬೇಕು. ಒಂದು ಡೆಸ್ಕ್ ಗೆ ಇಬ್ಬರು ವಿದ್ಯಾರ್ಥಿಯಂತೆ ಆಸನದ ವ್ಯವಸ್ಥೆ ಮಾಡುವುದು.
*ಸೂಚನಾ ಫಲಕದ ಮುಂದೆ ವಿದ್ಯಾರ್ಥಿಗಳು ಗುಂಪು ಗೂಡದಂತೆ ತಡೆಯುವುದು.
*ವಿದ್ಯಾರ್ಥಿ ತನ್ನದೇ ಆದಂತ ನೀರಿನ ಬಾಟಲಿ ತರುವುದು.
*ಕೆಮ್ಮು, ನೆಗಡಿ, ಜ್ವರ ಮೊದಲಾದವುಗಳಿಂದ ಬಳಲುತ್ತಿರೋ, ಲಕ್ಷಣಗಳಿರೋ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಕನಿಷ್ಠ ಎರಡು ಕೊಠಡಿಗಳನ್ನು ವಿಶೇಷ ಕೊಠಡಿಗಳೆಂದು ಕಾಯ್ದಿರಿಸುವುದು.
*ವಿದ್ಯಾರ್ಥಿಗಳು ಮಾಸ್ಕ್ ಧರಿಸಿ, ಪರೀಕ್ಷೆಗೆ ಹಾಜರಾಗುವಂತೆ ನೋಡಿಕೊಳ್ಳುವುದು.
*ಪರೀಕ್ಷಾ ಕೇಂದ್ರ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಹ್ಯಾಂಡ್ ಸ್ಯಾನಿಟೈಸ್ ಮಾಡುವುದು.
*ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುವ ಎಲ್ಲರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು.
ಮೇ 19ರಂದು ಪ್ರಕಟವಾಗಿತ್ತು SSLC ಫಲಿತಾಂಶ
ಮೇ 19ರಂದು ಎಸ್‌ಎಸ್‌ಎಲ್ ಸಿ ಫಲಿತಾಂಶ ಪ್ರಕಟವಾಗಿತ್ತು. ಈ ಬಾರಿ ಶೇ.85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ. 90.29ರಷ್ಟು ಬಾಲಕಿಯರು, ಶೇ. 81.30ರಷ್ಟು ಬಾಲಕರು ಪಾಸ್ ಆಗಿದ್ದರು. ಒಟ್ಟೂ 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 40,061 ಮಂದಿ ಗ್ರೇಸ್ ಮಾರ್ಕ್ ಮೂಲಕ ಪಾಸ್ ಆಗಿದ್ದರು.
145 ಮಂದಿ 625ಕ್ಕೆ 625 ಅಂಕ
ಒಟ್ಟು 145 ಮಂದಿ ಈ ಬಾರಿ 625ಕ್ಕೆ 625 ಅಂಕ ಪಡೆದು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಈ ಬಾರಿಯೂ ಫಲಿತಾಂಶದಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಮೆಲುಗೈ ಸಾಧಿಸಿದ್ದರು. ಗ್ರಾಮೀಣ ಪ್ರದೇಶದ ಶೇಕಡಾ 91.32ರಷ್ಟು ವಿದ್ಯಾರ್ಥಿಗಳು ಹಾಗೂ ನಗರ ಪ್ರದೇಶದ ಶೇಕಡಾ 86.64ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದರು.