ಬೆಳಗಾವಿಯಲ್ಲಿ BSC ಚೆನ್ನಬಸಪ್ಪ ಆಂಡ್ ಸನ್ಸ್ ಬೃಹತ್ ಜವಳಿ ಶೋ ರೂಂ ಉದ್ಘಾಟಿಸಿದ ಸಿಎಂ ಬಸವರಾಜ್ ಬೊಮ್ಮಾಯಿ

ಉತ್ತರಕರ್ನಾಟಕದ ಪ್ರಸಿದ್ಧ ಜವಳಿ ಅಂಗಡಿ ಬಿಎಸ್ ಚೆನ್ನಬಸಪ್ಪ ಆಂಡ್ ಸನ್ಸ್‍ನ ಬೃಹತ್ ಜವಳಿ ಶೋ ರೂಮ್‍ನ್ನು ಇದೀಗ ಬೆಳಗಾವಿಗೆ ಪಾದಾರ್ಪಣೆ ಮಾಡಿದೆ. ಬೆಳಗಾವಿಯಲ್ಲಿ ನೂತನ ಶೋರೂಂನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಉದ್ಘಾಟಿಸಿದರು.
ಬೆಳಗಾವಿ ಹಾಗೂ ಉತ್ತರಕರ್ನಾಟಕದ ಜನರಿಗೆ ಇದು ಅತ್ಯಂತ ಸಂತಸದ ಶುಭಸುದ್ದಿ. ಕರ್ನಾಟಕದ ಸುಪ್ರಸಿದ್ಧ ಜವಳಿ ವ್ಯಾಪಾರಸ್ಥರಾದ ಬಿಎಸ್ ಚನ್ನಬಸಪ್ಪ ಆಂಡ್ ಸನ್ಸ್‍ನವರು ಬೃಹತ್ ಬಟ್ಟೆ ಶೋರೂಮ್‍ನ್ನು ಗ್ರಾಹಕರಿಗಾಗಿಯೇ ಪ್ರಾರಂಭಿಸಿದ್ದಾರೆ. ಬಟ್ಟೆ ವ್ಯಾಪಾರದಲ್ಲಿ ಉತ್ತಮ ಗುಣಮಟ್ಟ, ಕಡಿಮೆ ಬೆಲೆ, ಹಾಗೂ ಉತ್ತಮ ಗ್ರಾಹಕರ ಸೇವೆಯಲ್ಲಿ ರಾಜ್ಯದಲ್ಲಿಯೇ ಸದಾ ಮುಂಚೂಣಿಯಲ್ಲಿರುವ ಹೆಮ್ಮೆಯ ಚನ್ನಬಸಪ್ಪ ಆಂಡ್ ಸನ್ಸ್ ಈಗ ಬೆಳಗಾವಿಯಲ್ಲಿಯೂ ಕೂಡ ತನ್ನ ಬೃಹತ್ ಜವಳಿ ಶೋರೂಮ್‍ನ್ನು ಅಧಿಕೃತವಾಗಿ ಆರಂಭಿಸಿದೆ. ನಗರದ ಟಿಳಕವಾಡಿಯ ಮಿಲ್ಲೇನಿಯಂ ಗಾರ್ಡನ್ ಪಕ್ಕದಲ್ಲಿ 5 ಅಂತಸ್ತಿನ ಬೃಹತ್ ಜವಳಿ ಶೋ ರೂಮ್‍ನ್ನು ಸಿಎಂ ಬೊಮ್ಮಾಯಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಸಚಿವರಾದ ಉಮೇಶ ಕತ್ತಿ, ಭೈರತಿ ಬಸವರಾಜು, ಉದ್ಯಮಿ ವಿಜಯ ಸಂಕೇಶ್ವರ, ಕೆಎಲ್‍ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ, ಬಿಎಸ್ ಚನ್ನಬಸಪ್ಪ ಕುಟುಂಬಸ್ಥರು ಸೇರಿ ಇನ್ನಿತರ ಗಣ್ಯರು ಮುಖ್ಯಮಂತ್ರಿಗಳಿಗೆ ಸಾಥ್ ಕೊಟ್ಟರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಎಸ್ ಚನ್ನಬಸಪ್ಪ ಆಂಡ್ ಸನ್ಸ್ ಮಾಲೀಕರಾದ ಬಿಎಸ್ ಚಂದ್ರಶೇಖರ್‍ರವರು ಮಾತನಾಡಿ ಬಿಎಸ್ ಚನ್ನಬಸಪ್ಪ ಆಂಡ್ ಸನ್ಸ್ ಪ್ರಾರಂಭವಾಗಿ 84 ವರ್ಷವಾಗಿದೆ. ಈಗಾಗಲೇ ದಾವಣಗೆರೆಯಲ್ಲಿ ನಮ್ಮ 9 ಬ್ರ್ಯಾಂಚ್‍ಗಳು ಕಾರ್ಯ ನಿರ್ವಹಿಸುತ್ತಿವೆ. ಹುಬ್ಬಳ್ಳಿಯಲ್ಲಿ ನಾವು ವಿನೂತನ ಶಾಖೆಯನ್ನು ತೆರೆಯುವ ಉದ್ದೇಶ ಹೊಂದಿದ್ದೆವು. ಆದರೆ ಕೋವಿಡ್‍ನಿಂದ ವಿಳಂಬವಾಯಿತು. ಪ್ರಭಾಕರ ಕೋರೆ ಪ್ರಭಾವದಿಂದ ಇಲ್ಲಿ ಬೆಳಗಾವಿಯಲ್ಲಿ ನೂತನ ಶೋರೂಮ್ ಪ್ರಾರಂಭ ಮಾಡಲು ನಮಗೆ ಅವಕಾಶ ಸಿಕ್ಕಿತು. ನಮ್ಮಲ್ಲಿ ಎಲ್ಲಾ ರೀತಿಯ ಬಟ್ಟೆಗಳು ಲಭ್ಯವಿದ್ದು, 150 ರೂ ಸೀರೆಯಿಂದ 2 ಲಕ್ಷ ವರೆಗೆ ಬೆಲೆಬಾಳುವ ಸೀರೆಗಳು ಲಭ್ಯವಿವೆ. ಇನ್ನು 300 ರೂಪಾಯಿಯಿಂದ ಪುರುಷರ ಬಟ್ಟೆ ಪ್ರಾರಂಭವಾಗಿ ವಿವಿಧ ಗುಣಮಟ್ಟದ ಆಧಾರದ ಮೇಲೆ ಬಟ್ಟೆಗಳ ದರ ನಿಗದಿಯಾಗುತ್ತವೆ. ಗ್ರಾಹಕರಿಗೆ ಉತ್ತಮ ಬೆಲೆ, ಗುಣಮ್ಮಟ್ಟ, ಸೇವೆ ನೀಡುವುದು ನಮ್ಮ ಉದ್ದೇಶವಾಗಿದೆ. ಪ್ರತಿಯೊಂದು ಬಟ್ಟೆಗಳೂ ಇಲ್ಲಿ ಒಂದೊಂದು ಫ್ಲೋರ್‍ನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.
ನಂತರ ಮಾತನಾಡಿದ ಸಿಎಂ ಬೊಮ್ಮಾಯಿ ಮಹಾರಾಷ್ಟ್ರ, ಕರ್ನಾಟಕ, ಗೋವಾ ಮೂರು ರಾಜ್ಯಗಳಲ್ಲಿಯೇ ಅತೀ ದೊಡ್ಡ ಶೋರೂಂನ್ನು ಇಂದು ನಾವೆಲ್ಲಾ ಉದ್ಘಾಟಿಸಿದ್ದೇವೆ. ಸುಮಾರು ಐದು ದಶಕಗಳ ಕಾಲ ಬಟ್ಟೆ, ಸೀರೆ ವ್ಯಾಪಾರದಲ್ಲಿಯೇ ಬಹಳ ದೊಡ್ಡ ಹೆಸರನ್ನು ಮಾಡಿದ್ದಾರೆ. ದಾವಣಗೆರೆ ಅವರ ಮುಖ್ಯ ವ್ಯಾಪಾರ ಸ್ಥಳ. ಇದೀಗ ಬೆಳಗಾವಿ ಹಾಗೂ ಉತ್ತರಕರ್ನಾಟಕಕ್ಕೆ ಬಂದಿರೋದು ನಮಗೆಲ್ಲಾ ಅತ್ಯಂತ ಸಂತೋಷವಾಗಿದೆ. ಈ ಭಾಗದ ತಾಯಂದಿರು, ಮಹಿಳೆಯರು, ಯುವಕರಿಗೆ ಎಲ್ಲ ರೀತಿಯ ಬಟ್ಟೆಗಳು ಇಲ್ಲಿವೆ. ಮದುವೆ ಬಟ್ಟೆಗಳು ಇಲ್ಲಿವೆ. ಇವರಿಗೆ ಶುಭವಾಗಲಿ ಎಂದು ಹಾರೈಸಿದರು.
ಒಟ್ಟಿನಲ್ಲಿ ಇಡೀ ರಾಜ್ಯದಲ್ಲಿಯೇ ಅತ್ಯಂತ ಸುಪ್ರಸಿದ್ಧಿ ಪಡೆದಿರುವ ಬಿಎಸ್ ಚನ್ನಬಸಪ್ಪ ಆಂಡ್ ಸನ್ಸ್‍ನ ಬೃಹತ್ ಶೋರೂಂ ಬೆಳಗಾವಿಯಲ್ಲಿ ಆರಂಭವಾಗಿರೋದು ಕುಂದಾನಗರಿ ಜನರಿಗೆ ಹರ್ಷ ತಂದಿದ್ದು. ಇನ್ನು ಬಟ್ಟೆ ಕೊಂಡುಕೊಳ್ಳಲು ಅಲ್ಲಿ ಇಲ್ಲಿ ಯಾಕೆ ಅಲೆಯೋದು. ಬಿಎಸ್ ಚನ್ನಬಸಪ್ಪ ಆಂಡ್ ಸನ್ಸ್ ಶೋರೂಂಗೆ ಹೋದ್ರೆ ಮುಗಿತು ನಿಮ್ಮ ಮನಸ್ಸಿಗೆ ಒಪ್ಪುವ, ಕೈಗೆಟಕುವ ದರದಲ್ಲಿ ಬಟ್ಟೆಗಳು ಸಿಗುತ್ತವೆ. ಕಾರ್ಯಕ್ರಮದಲ್ಲಿ ಸಂಸದೆ ಮಂಗಲ ಅಂಗಡಿ, ಶಾಸಕರಾದ ಮಹಾದೇವಪ್ಪ ಯಾದವಾಡ, ಲಕ್ಷ್ಮೀ ಹೆಬ್ಬಾಳ್ಕರ್, ದುರ್ಯೋಧನ ಐಹೊಳೆ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.