117ಕೆಜಿ ಮಾದಕ ವಸ್ತು ಗಳನ್ನು ನಿಯಮಾನುಸಾರ ಎಸ್‍ಪಿ ಲಕ್ಷ್ಮಣ ನಿಂಬರಗಿ ಅವರ ಉಪಸ್ಥಿತಿಯಲ್ಲಿ ನಿಷ್ಕ್ರೀಯಗೊಳಿಸಲಾಯಿತು.

ಎನ್‍ಡಿಪಿಎಸ್ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ಬೆಳಗಾವಿ ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮೀಟಿ ವತಿಯಿಂದ ಎಸ್‍ಪಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ನಾಳೆ ನಿಷ್ಕ್ರೀಯಗೊಳಿಸಲಾಯಿತು.
ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಾಣಿಕೆ, ಮಾರಾಟ, ಬೆಳೆಯುತ್ತಿದ್ದವರ ಮೇಲೆ ದಾಳಿ ಮಾಡಿ ಎನ್‍ಡಿಪಿಎಸ್ ಕಾಯ್ದೆಯಡಿಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿದ ಒಟ್ಟು 43 ಪ್ರಕರಣಗಳಲ್ಲಿ ಅಂದಾಜು 7 ಲಕ್ಷ 78 ಸಾವಿರ ಮೌಲ್ಯದ 117 ಕೆಜಿ 399 ಗ್ರಾಂ ಮಾದಕ ವಸ್ತುಗಳನ್ನು ನ್ಯಾಯಾಲಯ ಹಾಗೂ ಮಾಲಿನ್ಯ ನಿಯಂತ್ರಣಾಧಿಕಾರಿಗಳ ಅನುಮತಿಯೊಂದಿಗೆ ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮೀಟಿಯು ಸವದತ್ತಿ ತಾಲೂಕಿನ ಮುರಗೋಡ ಪೆÇಲೀಸ್ ಠಾಣಾ ವ್ಯಾಪ್ತಿಯ ಹಾರೂಗೊಪ್ಪ ಗ್ರಾಮದ ಬಳಿಯ ದಿ ಬೆಲಗಾಂ ಗ್ರೀನ್ ಎನ್ವಿರಾನ್‍ಮೆಂಟಲ್ ಮ್ಯಾನೆಜಮೆಂಟ್ ಪ್ರೈವೇಟ್ ಲಿಮಿಟೆಡ್‍ನಲ್ಲಿ ಮಾದಕ ವಸ್ತುಗಳನ್ನು ನಿಯಮಾನುಸಾರ ಎಸ್‍ಪಿ ಲಕ್ಷ್ಮಣ ನಿಂಬರಗಿ ಅವರ ಉಪಸ್ಥಿತಿಯಲ್ಲಿ ನಿಷ್ಕ್ರೀಯಗೊಳಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್‍ಪಿ ಮಹಾನಂದ ನಂದಗಾವಿ, ಡಿಎಸ್‍ಪಿ ಹಟ್ಟಿ ಸೇರಿದಂತೆ ಇನ್ನಿತರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.