Karnataka News
34 ಲಕ್ಷ ರೂ. ಮೌಲ್ಯದ 763 ಕೆಜಿ ಮಾದಕ ವಸ್ತು ನಾಶ

ವಿಜಯಪುರ: ಜಿಲ್ಲೆಯ ಪೊಲೀಸರು ಭಾನುವಾರ ಮಾದಕ ವಸ್ತು ವಿರೋಧಿ ದಿನಾಚರಣೆ ನಿಮಿತ್ತ 34.32 ಲಕ್ಷ ರೂ. ಮೌಲ್ಯದ 763.39 ಕೆಜಿ ತೂಕದ ಮಾದಕ ವಸ್ತುಗಳನ್ನು ನಾಶ ಮಾಡಿದ್ದಾರೆ.
ನ್ಯಾಯಾಲಯದ ಅನುಮತಿ ಪಡೆದು, ಜಿಲ್ಲೆಯಲ್ಲಿ ವಶಕ್ಕೆ ಪಡೆದಿರುವ ಮಾದಕ ವಸ್ತುಗಳನ್ನು ಜಿಲ್ಲಾ ಮಾದಕ ವಸ್ತು ವಿಲೇವಾರಿ ಸಮಿತಿ ಅಧ್ಯಕ್ಷರೂ ಆಗಿರುವ ಎಸ್ಪಿ ಆನಂದಕುಮಾರ ನೇತೃತ್ವದಲ್ಲಿ ನಾಶಮಾಡಲಾಯಿತು.
ನಗರದ ಹೊರ ವಲಯದಲ್ಲಿ ಇರುವ ಮಹಾನಗರ ಪಾಲಿಕೆಯ ಕರ್ನಾಟಕ ಪ್ರೈವೇಟ್ ಮೆಡಿಕಲ್ ಪ್ರಾಕ್ಟೀಶನರ್ ಟ್ರಸ್ಟ್ ನ ಅಗ್ನಿ ವೇಸ್ಟ್ ಮ್ಯಾನೇಜ್ಮೆಂಟ್ ಘಟಕದಲ್ಲಿ ವೈಜ್ಞಾನಿಕ ರೀತಿಯಲ್ಲಿ ಮಾದಕ ವಸ್ತುಗಳನ್ನು ನಾಶ ಮಾಡಲಾಯಿತು.
ಜಿಲ್ಲಾ ಮಾದಕ ವಸ್ತು ವಿಲೆ ನಿರ್ವಹಣಾ ಸಮಿತಿ ಅಧ್ಯಕ್ಷರಾದ ಎಎಸ್ಪಿ ರಾಮ ಅರಸಿದ್ಧಿ, ಡಿಎಸ್ಪಿಗಳಾದ ಲಕ್ಷ್ಮೀನಾರಾಯಣ, ಚಂದ್ರಕಾಂತ ನಂದರೆಡ್ಡಿ, ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯ ಸುಖದೇವ ಇವರ ಸಮ್ಮುಖದಲ್ಲಿ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು.