ಮ್ಯಾರಥಾನ್ ಓಟದಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನ ಕಿತ್ತೂರ ಫೌಜೀ ಫ್ಯಾಕ್ಟರಿ ವಿದ್ಯಾರ್ಥಿಗಳ ತೇಕ್ಕೆಗೆ

ಮ್ಯಾರಥಾನ್ ಓಟದಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನ ಕಿತ್ತೂರ ಫೌಜೀ ಫ್ಯಾಕ್ಟರಿ ವಿದ್ಯಾರ್ಥಿಗಳ ತೇಕ್ಕೆಗೆ
—————————————————————————-
ಚ.ಕಿತ್ತೂರ: ವೀರ ರಾಣಿ ಚನ್ನಮ್ಮನ ಕಿತ್ತೂರಿನಲ್ಲಿ ಮಾದಕವಸ್ತು ಮುಕ್ತ ಭಾರತ್ ನಿರ್ಮಾಣ ಹಾಗೂ ಅಕ್ರಮ ಕಳ್ಳಸಾಗಣೆ ನಿಯಂತ್ರಣದತ್ತ ಒಂದು ಹೆಜ್ಜೆ ಕಾರ್ಯಕ್ರಮ ನಿಮಿತ್ಯ ದಿ.ಬಸವಂತರಾಯ ದೊಡಗೌಡರ ಫೌಂಡೇಷನ್ (ರಿ) ವತಿಯಿಂದ ಮಹಾ ಮ್ಯಾರಥಾನ್ ಓಟ ಆಯೋಜಿಸಲಾಗಿತ್ತು.
ಈ ಮ್ಯಾರಥಾನ್ ಓಟದಲ್ಲಿ 60ಕ್ಕೂ ಹೆಚ್ಚು ಯುವಕ ಯುವತಿಯರು ಭಾಗವಹಿಸಿದ್ದರು.ಕಿತ್ತೂರ ಫೌಜೀ ಫ್ಯಾಕ್ಟರಿ ಎಂದೇ ಹೆಸರುವಾಸಿಯಾದ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಕೂಡ ಇದರಲ್ಲಿ ಭಾಗವಹಿಸಿದ್ದರು. 5 ಕಿ.ಮೀ ಓಟದಲ್ಲಿ ಪ್ರತಮ್ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಮ್ಯಾರಥಾನ್ ಓಟದಲ್ಲಿ ಕಿತ್ತೂರ ಫೌಜೀ ಫ್ಯಾಕ್ಟರಿ ವಿದ್ಯಾರ್ಥಿಗಳಾದ ಕುಮಾರ ಆಕಾಶ ಚವಳಗಿ ದ್ವಿತೀಯ ಸ್ತಾನ ಹಾಗೂ ಕುಮಾರ ದೇವರಾಜ ದೊಡಮನಿ ತೃತೀಯ ಸ್ಥಾನ ಪಡೆದಿದ್ದು ಅವರನ್ನು ಸಂಸ್ತೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮ್ಯಾರಥಾನ್ ಓಟದಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದು ನಮ್ಮ ತರಬೇತಿ ಕೇಂದ್ರಕ್ಕೆ ಹೆಮ್ಮೆಯ ವಿಷಯ ಹಾಗೂ ಪ್ರತಿಯೊಬ್ಬರೂ ಇದೇ ರೀತಿ ಸೇನಾ ಭರ್ತಿ ತರಬೇತಿ ಜೊತೆಗೇ ಕ್ರೀಡೆಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸುವುದರಿಂದ ಆತ್ಮ ವಿಶ್ವಾಸ ಹೆಚ್ಚುತ್ತದೆ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕೇಂದ್ರದ ಸಂಸ್ಥಾಪಕರು ಹಾಗೂ ನಿವೃತ್ತ ಸೇನಾಧಿಕಾರಿಗಳಾದ ಶ್ರೀ ಪರ್ವೇಜ್ ಹವಾಲ್ದಾರ ಮಾತನಾಡಿದರು.
ವಿದ್ಯಾರ್ಥಿಗಳು ಈ ಫಲಿತಾಂಶ ಪಡೆಯಲು ಕಾರಣೀಬುತರಾದ ದೈಹಿಕ ತರಬೇತುದಾರ ತಕ್ವಿಮ್ ಗೋಕಾಕ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಹಸನಸಾಬ ಗೋಕಾಕ್, ಶ್ರೀ ಗಂಗಾಧರ ಸನಗೌಡರ್,ಶ್ರೀ ಲೋಕನಾಥ್ ಹಿರೇಹೊಳಿ ಸೇರಿದಂತೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.