Karnataka News
ಅಪಘಾತದಲ್ಲಿ ಮೃತಪಟ್ಟ 7 ಜನರ ಮರಣೋತ್ತರ ಪರೀಕ್ಷೆ ಮುಕ್ತಾಯ ತಮ್ಮ ಊರುಗಳಿಗೆ ಶವಗಳನ್ನು ಒಯ್ದ ಕುಟುಂಬಸ್ಥರು
ಕ್ರೂಸರ್ ಪಲ್ಟಿಯಾಗಿ ಸ್ಥಳದಲ್ಲೇ 7 ಜನರ ದುರ್ಮರಣ ಪ್ರಕರಣದಲ್ಲಿ ಅಪಘಾತದಲ್ಲಿ ಮೃತಪಟ್ಟ 7 ಜನರ ಮರಣೋತ್ತರ ಪರೀಕ್ಷೆ ಮುಕ್ತಾಯ

ಕ್ರೂಸರ್ ಪಲ್ಟಿಯಾಗಿ ಸ್ಥಳದಲ್ಲೇ 7 ಜನರ ದುರ್ಮರಣ ಪ್ರಕರಣದಲ್ಲಿ ಅಪಘಾತದಲ್ಲಿ ಮೃತಪಟ್ಟ 7 ಜನರ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು. ಕುಟುಂಬಸ್ಥರು ತಮ್ಮ ಊರುಗಳಿಗೆ ಶವಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಬೆಳಗಾವಿ ಬಿಮ್ಸ್ ಶವಾಗಾರದಲ್ಲಿ ಮೃತ ಏಳು ಮಂದಿಯರ ಶವಗಳ ಮರಣೋತ್ತರ ಪರೀಕ್ಷೆ ಮುಗಿದಿದ್ದು. ಕೊನೆಯ ಬಾರಿ ಮುಖ ನೋಡಲು ಶವಾಗಾರ ಸಿಬ್ಬಂದಿ ಕುಟುಂಬಸ್ಥರು ಕರೆದರು. ಮರಣೋತ್ತರ ಪರೀಕ್ಷೆ ಬಳಿಕ ಆಸ್ಪತ್ರೆ ಸಿಬ್ಬಂದಿಗಳು ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಶವಾಗಾರ ಎದುರು ಮೃತರ ಕುಟುಂಬಸ್ಥರು ಜಮಾಯಿಸಿದ್ದಾರೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ ತಮ್ಮ ತಮ್ಮ ಊರುಗಳಿಗೆ ಶವಗಳನ್ನು ಕುಟುಂಬಸ್ಥರು ತೆಗೆದುಕೊಂಡು ಹೋದರು.