ಬಹುಭಾಷಾ ನಟ ನಾಸಿರ್! ಚಿತ್ರರಂಗಕ್ಕೆ ಗುಡ್ ಬೈ ಹೇಳಲಿದ್ದಾರೆ ಕಾರಣವೇನು?

ಬಾಹುಭಾಷಾ ನಟ ನಾಸಿರ್ ಯಾರಿಗೆ ಗೊತ್ತಿಲ್ಲ. ದಕ್ಷಿಣದಿಂದ ಉತ್ತರದವರೆಗೆ ಪೋಷಕ ಪಾತ್ರಗಳಲ್ಲಿ ಮಿಂಚಿದ ನಟನೀತ. ದಕ್ಷಿಣ ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲೂ ನಾಸಿರ್ ಅಭಿನಯಿಸಿದ್ದಾರೆ. ಹೀಗಾಗಿ ಇವರು ದಕ್ಷಿಣ ಭಾರತದಲ್ಲಿ ಚಿರಪರಿಚಿತ.
ಪೋಷಕ ಪಾತ್ರಗಳಿಂದ ಹಿಡಿದು ಖಳನಾಯಕನವರೆಗೂ ವಿಶಿಷ್ಟ ಅವತಾರಗಳಲ್ಲಿ ನಾಸಿರ್ ನಟಿಸಿದ್ದಾರೆ.
ಸುಮಾರು 5 ದಶಕಗಳ ಕಾಲ ನಾಸಿರ್ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ಅವರಿಗೆ ಅವಕಾಶಗಳೇನು ಕಮ್ಮಿಯಾಗಿರಲಿಲ್ಲ. ಇನ್ನೂ ಕೈ ತುಂಬಾ ಸಿನಿಮಾಗಳಿವೆ.
ಸಿನಿಮಾ ಬ್ಯುಸಿಯಾಗಿದ್ದರೂ ನಾಸಿರ್ ಯಾಕೆ ಚಿತ್ರರಂಗಕ್ಕೆ ಗುಡ್ ಬೈ ಹೇಳಿತ್ತಿದ್ದಾರೆ ಎಂಬ ಸುದ್ದಿಯೊಂದು ವರದಿಯಾಗಿದೆ. ಈ ಸುದ್ದಿ ನಿಜವೇ ಆಗಿದ್ದರೆ, ನಾಸಿರ್ ಚಿತ್ರರಂಗವನ್ನು ತೊರೆಯುವುದಕ್ಕೆ ಕಾರಣವೇನು? ದಿಢೀರನೇ ಈ ನಿರ್ಧಾರಕ್ಕೆ ಕಾರಣವೇನು? ಚಿತ್ರರಂಗದಲ್ಲಿ ಹಬ್ಬಿರುವ ಸುದ್ದಿಯೇನು? ಎಂದು ತಿಳಿಯಲು ಮುಂದೆ ಓದಿ.
ನಾಸಿರ್ ಬಹುಮುಖ ಪ್ರತಿಭೆ
ನಾಸಿರ್ ಚಿತ್ರರಂಗ ಕಂಡ ಅತ್ಯದ್ಭುತ ನಟರಲ್ಲಿ ಒಬ್ಬರು. ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಹಾಗಂತ ಇವರು ಕೇವಲ ನಟರಷ್ಟೇ ಅಲ್ಲ. ನಿರ್ದೇಶಕನೂ ಹೌದು. ನಿರ್ಮಾಪಕನೂ ಹೌದು. ಅಷ್ಟೇ ಅಲ್ಲದೆ ಗಾಯಕ ಹಾಗೂ ಡಬ್ಬಿಂಗ್ ಕಲಾವಿದ ಕೂಡ ಹೌದು. ದಕ್ಷಿಣ ಭಾರತ ಕಂಡ ಅದ್ಭುತ ಬಹುಮುಖ ಪ್ರತಿಭೆ ಅಂದರೆ, ಅದು ನಾಸಿರ್. ಇದೇ ನಟ ನಟನೆಯಿಂದ ನಿವೃತ್ತಿ ಹೊಂದಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ನಾಸಿರ್ ನಟನೆಗೆ ಗುಡ್ ಬೈ
ಹಿರಿಯ ನಟ ನಾಸಿರ್ ನಟನೆಗೆ ಗುಡ್ ಬೈ ಹೇಳುತ್ತಿದ್ದಾರೆ ಎಂದು ನ್ಯೂಸ್ 18 ಕನ್ನಡ ವೆಬ್ ಸೈಟ್ ವರದಿ ಮಾಡಿದೆ. ಈ ವರದಿ ಪ್ರಕಾರ ಬಹುಭಾಷಾ ನಟ ನಾಸಿರ್ ಶೀಘ್ರದಲ್ಲಿ ನಟನೆಗೆ ಗುಡ್ ಬೈ ಹೇಳಲಿದ್ದಾರೆ. ಈ ವಿಚಾರ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆಯಂತೆ. ಹಿರಿಯ ನಟನ ಈ ನಿರ್ಧಾರದಿಂದ ಏನಾದರೂ ಬಲವಾದ ಕಾರಣವಿದೆಯೇ ಎಂಬ ಬಗ್ಗೆ ಚಿತ್ರರಂಗದಲ್ಲಿ ಚರ್ಚೆಯಾಗುತ್ತಿದೆ. ಅಸಲಿಗೆ ಈ ನಿರ್ಧಾರದ ಹಿಂದೆ ಆರೋಗ್ಯ ಸಮಸ್ಯೆಯಿದೆ ಎನ್ನಲಾಗಿದೆ.
ನಾಸಿರ್ ಹೃದಯದ ಸಮಸ್ಯೆ
ನಾಸಿರ್ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಕೊರೊನಾ ಸಮಯದಲ್ಲಿ ನಾಸಿರ್ ಅವರಿಗೆ ಹೃದಯದ ಸಮಸ್ಯೆ ಎದುರಾಗಿತ್ತು. ಅಲ್ಲದೆ ಇತ್ತೀಚೆಗೆ ಮಾಧ್ಯಮಗಳ ಸಂದರ್ಶನದಲ್ಲಿಯೂ ಈ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ. ಜೊತೆಗೆ ಆಚಾರ್ಯ ಸೆಟ್ಟಿನಲ್ಲಿ ಇದೇ ಮಾತನ್ನು ಹೇಳಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿದ ಬಳಿಕ ಸಿನಿಮಾದಿಂದ ದೂರ ಉಳಿದು ವಿಶ್ರಾಂತಿ ಪಡೆಯಲಿದ್ದಾರಂತೆ.
ನಾಸಿರ್ ಕನ್ನಡಿಗರಿಗೂ ಚಿರಪರಿಚಿತ
ನಾಸಿರ್ ಕನ್ನಡದಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುಮಾರು 15ಕ್ಕೂ ಅಧಿಕ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ‘ಧಮ್’, ‘ಸೈನೈಡ್’, ‘ಅಜಯ್’, ‘ಬಿಂದಾಸ್’, ‘ಸೂರ್ಯಕಾಂತಿ’, ‘ತಮಸ್ಸು’, ‘ಬಚ್ಚನ್’,’ಕೋಟಿಗೊಬ್ಬ 2′, ‘ವಿಕ್ಟರಿ 2’ ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ರಮೇಶ್ ಅರವಿಂದ್ ನಟಿಸುತ್ತಿರುವ ‘ಶಿವಾಜಿ ಸೂರತ್ಕಲ್ 2’ ಸಿನಿಮಾದಲ್ಲೂ ನಟಿಸಿದ್ದಾರೆ.