*ಕಾಂಗ್ರೆಸ್ ಸಿದ್ಧಾಂತಗಳ ಬಲದಲ್ಲಿ ನಡೆಯುವ ಪಕ್ಷ: ಲಕ್ಷ್ಮೀ ಹೆಬ್ಬಾಳಕರ್*

ಬೆಳಗಾವಿ:ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಸಿದ್ಧಾಂತವಿದ್ದು ಅಂತಹ ಸಿದ್ಧಾಂತಗಳ ಮೂಲಕ ಮತದಾರರನ್ನು ತಲುಪುತ್ತೇವೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಮುಂಬರುವ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹಾಗೂ ಎಪಿಎಂಸಿ ಚುನಾವಣೆಗಳ ಪೂರ್ವ ಸಿದ್ಧತೆಗಾಗಿ ಹಮ್ಮಿಕೊಂಡಿದ್ದ ಸಾಂಬ್ರಾ, ಸುಳೇಬಾವಿ, ಹಿರೇಬಾಗೇವಾಡಿ ಹಾಗೂ ಹಲಗಾ ಜಿಪಂ ಕ್ಷೇತ್ರಗಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಶತಮಾನದ ಇತಿಹಾಸವಿದೆ. ಜನಪರ ಕಾಳಜಿ ಮತ್ತು ಸಮಾಜದ ಹಿತ ಚಿಂತನೆಯನ್ನು ಸದಾ ಕಾಯ್ದುಕೊಂಡು ಬಂದಿರುವ ಪಕ್ಷ ನಮ್ಮದು. ರಾಜಕೀಯ ಏರಿಳತಗಳ ನಡುವೆಯೂ ಕಾಂಗ್ರೆಸ್ ಪಕ್ಷ ತನ್ನ ಸಿದ್ಧಾಂತಗಳಿಗೆ ಬದ್ಧವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ನಮ್ಮ ಪಕ್ಷ ಬೃಹದಾಕಾರವಾಗಿ ಬೆಳೆಯುತ್ತಿದ್ದು ಸಾವಿರಾರು ಕಾರ್ಯಕರ್ತರು ಕಾಂಗ್ರೆಸ್ ನೆಡೆಗೆ ತಮ್ಮ ಒಲವು ತೋರಿಸುತ್ತಿದ್ದಾರೆ. ಇದರಿಂದ ಪಕ್ಷದ ಬಲ ಮತ್ತಷ್ಟು ಹೆಚ್ಚುತ್ತಿದೆ ಎಂದರು.
ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಪಕ್ಷದ ಬಲವರ್ಧನೆಗಾಗಿ ಶ್ರಮಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಗಿದ್ದು ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷವನ್ನು ಗಟ್ಟಿಗೊಳಿಸಲು ಶ್ರಮಿಸುವಂತೆ ಕರೆ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸಿ. ಸಿ. ಪಾಟೀಲ್, ಶಂಕರಗೌಡ ಪಾಟೀಲ್, ಮಹಾಂತೇಶ ಮತ್ತಿಕೊಪ್ಪ, ಅಡಿವೇಶ ಇಟಗಿ, ಶ್ರೀಕಾಂತ ಮದುಭರಮಣ್ಣವರ್ , ಬಿ. ಎನ್. ಪಾಟೀಲ್, ಸುರೇಶ ಇಟಗಿ, ಮನೋಹರ ಬಾಂಡ್ಲೆ, ಅರ್ಜುನ ಗೌಡ ಪಾಟೀಲ್, ಯಲ್ಲಪ್ಪ ಗುಂಡವಾಡ್ಕರ್, ಬಸನಗೌಡ ಪಾಟೀಲ್, ಗೌಸಮೋದ್ದೀನ್ ಜಾಲಿಕೊಪ್ಪ, ತಬ್ಸುಮ್ ಮುಲ್ಲಾ, ಸಮೀನಾ ನದಾಫ್, ಪ್ರಕಾಶ ಕಡ್ಯಾಗೋಳ, ಜಗದೀಶ ಯಳ್ಳೂರ, ಇಸ್ಮಾಯಿಲ್ ತಿಗಡಿ, ರಾಧಿಕಾ ಮುತಗೇಕರ್ ಮೊದಲಾದವರು ಇದ್ದರು.