ವೈರಲ್ ಆಯ್ತು ನಟಿ ಕಂಗನಾ ಅಂದು ಹೇಳಿದ್ದ ಭವಿಷ್ಯವಾಣಿ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ತಟ್ಟಿತಾ ಮಹಿಳೆಯ ಶಾಪ..?

#UddhavThackarey
Only #KanganaRanaut has the power to predict 🙄 pic.twitter.com/IaatY1Dpgr
– Biraja Prasad Rath (@iambiraja)
ಅದು 2020ನೇ ವರ್ಷ, ಅದೊಂದು ದಿನ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಬುಲ್ಡೋಜರ್ ಒಂದು ಕಟ್ಟಡವನ್ನ ನೆಲಸಮಗೊಳಿಸಿತ್ತು. ಅದು ಬಾಲಿವುಡ್ ನಟಿ ಕಂಗನಾ ರಣಾವತ್ ಸಂಬಂಧಿಸಿದ ಕಟ್ಟಡವಾಗಿತ್ತು. ಆ ಸಮಯದಲ್ಲಿ ನೊಂದ ಕಂಗನಾ ಕೆಲ ಮಾತುಗಳನ್ನ ಹೇಳಿದ್ದರು. ಆಗ ಹೇಳಿದ್ದ ಮಾತುಗಳು ಈಗ ವಾಸ್ತವದಲ್ಲಿ ನಡೆಯುತ್ತಿದೆ. ಈಗ ಅದೇ ವಿಡಿಯೋಗಳು ವೈರಲ್ ಆಗ್ತಿವೆ.
ಈ ವಿಡಿಯೋದಲ್ಲಿ ” ಉದ್ಧವ್ ಠಾಕ್ರೆ, ನಿಮಗೆ ಏನನಿಸುತ್ತೆ, ಫಿಲ್ಮ್ ಮಾಫಿಯಾಗಳೊಂದಿಗೆ ಶಾಮೀಲಾಗಿ ನನ್ನ ಮನೆಯನ್ನ ಕೆಡವುದರ ಮೂಲಕ ನೀವು ನನ್ನ ವಿರುದ್ಧ ಸೇಡು ತೀರಿಸಿಕೊಂಡಿದ್ದೀರಾ ? ಇಂದು ನನ್ನ ಮನೆಯನ್ನು ಒಡೆಯಲಾಗಿದೆ. ನಾಳೆ ನಿನ್ನ ದುರಹಂಕಾರ ಚೂರು ಚೂರಾಗುತ್ತೆ. ಇದು ಸಮಯದ ಕಾಲಚಕ್ರ ನೆನಪಿರಲಿ.” ಎಂದು ಕಂಗನಾ ಹೇಳಿದ್ದರು.
“ಯಾರು ಮಹಿಳೆಯನ್ನು ಅವಮಾನಿಸಿದರೂ ಅವನ ಅಥವಾ ಅವಳ ಅವನತಿ ತಪ್ಪಿದ್ದಲ್ಲ, ಎಂಬುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ರಾವಣ ಸೀತೆಯನ್ನ ಅವಮಾನಿಸಿದ, ಕೌರವರು ದ್ರೌಪದಿಯನ್ನ ಅವಮಾನಿಸಿದರೂ ನಾನು ಆ ಮಹಿಳೆಯರ ಜೊತೆ ನನ್ನನ್ನ ಹೋಲಿಸಿಕೊಳ್ಳುತ್ತಿಲ್ಲ. ಆದರೆ ನಾನೂ ಕೂಡಾ ಒಬ್ಬ ಮಹಿಳೆ. ನಾನು ನನ್ನತನವನ್ನ ಕಾಪಾಡಿಕೊಂಡಿದ್ದೇನೆ. ನಾನು ಯಾರಿಗೂ ನೋವು ಮಾಡಿಲ್ಲ. ಯಾರ್ಯಾರು ಮಹಿಳೆಯರನ್ನ ಅಗೌರವಿಸಿದ್ದಾರೋ, ಅವರ ನಾಶ ಗ್ಯಾರಂಟಿ ಅನ್ನುವುದು ನನ್ನ ಬಲವಾದ ನಂಬಿಕೆ ಎಂದು ಕಂಗನಾ ಕಾರ್ಯಕ್ರಮದಲ್ಲೂ ಹೇಳಿದ್ದರು.
ಟ್ವಿಟರ್ ಬಳಕೆದಾರರು ಈ ವಿಡಿಯೋವನ್ನ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕಂಗನಾ ನುಡಿದ ಭವಿಷ್ಯವಾಣಿಯನ್ನ ಟ್ರೋಲ್ ಮಾಡುತ್ತಿದ್ದಾರೆ. ಮಹಿಳೆಯ ಶಾಪ ಉದ್ಧವ್ ಠಾಕ್ರೆಗೆ ತಟ್ಟಿದೆ ಅಂತಾನೂ ಹೇಳುತ್ತಿದ್ದಾರೆ.