ಅಪ್ರಾಪ್ತೆ ಪತ್ನಿಯ ಮೇಲೆ ಪತಿ ಸ್ನೇಹಿತರಿಂದಲೇ ಗ್ಯಾಂಗ್ರೇಪ್; ಮೂವರ ಬಂಧನ, ಓರ್ವ ಎಸ್ಕೇಪ್

ಆದರೆ ಇತ್ತೀಚಿನ ದಿನಗಳಲ್ಲಿ ಪತಿ, ಪತ್ನಿಯ ನಡುವೆ ವೈಮನಸ್ಸು, ದ್ವೇಷ, ಅಸೂಹೆ, ಅನುಮಾನಗಳು ಹೆಚ್ಚಾಗಿ ಕೌಟುಂಬಿಕ ಕಲಹಗಳಿಂದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇವೆಲ್ಲಾ ತರಹದ ಪ್ರಕರಣಗಳೂ ಒಂದು ಭಾಗವಾದ್ರೆ ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದಿರುವ ಅಮಾನವೀಯ ಕೃತ್ಯ ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತ ಸ್ಥಿತಿಯನ್ನ ನಿರ್ಮಾಣ ಮಾಡಿದೆ.
ಮದುವೆ ಬಳಿಕ ಸಂತ್ರಸ್ತೆ ಪೋಷಕರಿಗೆ ದೂರು
ಅದೇನಂದ್ರೆ ಚಿತ್ರದುರ್ಗ ನಗರದ ನಿವಾಸಿ 17 ವರ್ಷ 6 ತಿಂಗಳ ವಯಸ್ಸಿನ ಅಪ್ರಾಪ್ತೆಯನ್ನು ಇಷ್ಟಪಟ್ಟಿದ್ದನು. ಅಪ್ರಾಪ್ತೆಯನ್ನು ಬಲವಂತದಿಂದ ಮದುವೆ ಸಹ ಮಾಡಿಕೊಂಡಿದ್ದಾನೆ. ಮದುವೆ ಬಳಿಕ ವಿಷಯವನ್ನು ಅಪ್ರಾಪ್ತೆಯ ಪೋಷಕರಿಗೂ ತಿಳಿಸಿದ್ದಾನೆ.
ನಾನು ಇಷ್ಟಪಟ್ಟು ನಿಮ್ಮ ಮಗಳನ್ನು ಮಸೀದಿಯಲ್ಲಿ ಮದುವೆಯಾಗಿದ್ದೇನೆ. ಈ ವಿಷಯವನ್ನು ಯಾರಿಗಾದ್ರೂ ತಿಳಿಸಿದ್ರೆ ನಿಮ್ಮ ಮಗಳು ಸೇರಿದಂತೆ ನಿಮ್ಮನ್ನು ಸಹ ಸುಮ್ಮನೆ ಬಿಡಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಸಣ್ಣ ಸಣ್ಣ ಕಾರಣಕ್ಕೂ ಪತ್ನಿ ಜೊತೆ ಜಗಳ
ಇನ್ನು ಮದುವೆ ಬಳಿಕ ಪ್ರೀತಿಸಿದ ಅಪ್ರಾಪ್ತೆ ಮೇಲೆ ಅನುಮಾನ ವ್ಯಕ್ತಪಡಿಸಿ, ಜಗಳ ಸಹ ಮಾಡುತ್ತಿದ್ದನು. ಇತ್ತೀಚೆಗೆ ತಾಯಿ ಸಂಬಂಧಿಕರ ಜೊತೆಯಲ್ಲಿ ಕಾರ್ಯಕ್ರಮಕ್ಕೆ ಹೋಗಿದ್ದ ಒಂದು ಸಣ್ಣ ಕಾರಣಕ್ಕೆ ಥಳಿಸಿದ್ದನು ಎಂದು ಸಂತ್ರೆಸ್ತೆ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪತಿಯ ನಾಲ್ವರು ಗೆಳೆಯರಿಂದ ಗ್ಯಾಂಗ್ರೇಪ್
ಕೆಲ ದಿನಗಳ ಹಿಂದೆ ಪತಿಯ ಸಹಾಯದಿಂದಲೇ ಆತನ ನಾಲ್ವರು ಗೆಳೆಯರು ಸಂತ್ರಸ್ತೆಯನ್ನು ನಿರ್ಮಾಣ ಹಂತದ ಕಟ್ಟಡದೊಳಗೆ ಕರೆದೊಯ್ದು ಸಾಮೂಹಿಕ ಆತ್ಯಾಚಾರಗೈದಿರುವ ಆರೋಪಗಳು ಕೇಳಿ ಬಂದಿವೆ. ಅತ್ಯಾಚಾರದ ವಿಷಯವನ್ನು ಕುಟುಂಬಸ್ಥರಿಗೆ ತಿಳಿಸಿದ್ರೆ ಕೊಲೆ ಮಾಡುವ ಬೆದರಿಕೆ ಸಹ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಘಟನೆ ಜೂನ್ 7ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಅಪ್ರಾಪ್ತೆ ಚಿಕಿತ್ಸೆ ಪಡೆದಿದ್ದು ಚೇತರಿಸಿಕೊಂಡಿದ್ದಾರೆ. ಈ ಸಂಬಂಧ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಬಾಲಕಿ ತಾಯಿ ದೂರು ನೀಡಿದ್ದು FIR ದಾಖಲಾಗಿದೆ.
ಮೂವರ ಬಂಧನ, ಓರ್ವ ಪರಾರಿ
ಸಂತ್ರಸ್ತೆ ತಾಯಿ ನೀಡಿದ ದೂರು ಆಧರಿಸಿ ತನಿಖೆ ಪ್ರಾರಂಭ ಮಾಡಿರುವ ಪೊಲೀಸರು, ಆರೋಪಿ ಪತಿ ಸೇರಿದಂತೆ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಶೀಘ್ರದಲ್ಲೇ ಆತನನ್ನು ಸಹ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.