Karnataka NewsNational
ಫುಲೆ ಶಾಹು ಅಂಬೇಡ್ಕರ್ ಪೌಂಡೇಶನ ವತಿಯಿಂದ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಛತ್ರಪತಿ ಶಾಹು ಮಹಾರಾಜರ 148 ನೇ ಜಯಂತಿ.

ಫುಲೆ ಶಾಹು ಅಂಬೇಡ್ಕರ್ ಪೌಂಡೇಶನ ವತಿಯಿಂದ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಛತ್ರಪತಿ ಶಾಹು ಮಹಾರಾಜರ 148 ನೇ ಜಯಂತಿ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಕೀಲರಾದ ಸುರೇಂದ್ರ ಉಗಾರೆಯವರು ಶಾಹು ಮಹಾರಾಜರು ಇತಿಹಾದಲ್ಲಿ ಕ್ರಾಂತಿಕಾರಿ ರಾಜರಂದೇ ಬಿಂಬಿತರಾಗಿದ್ದಾರೆ. ಇವರ ಅಧಿಕಾರವಧಿಯಲ್ಲಿ ಆಡಳಿತದಲ್ಲಿ ಆರ್ಥಿಕವಾಗಿ ಹಿಂದೆ ಇದ್ದ ಜನರಿಗೆ ಶೆ 50%. ಮೀಸಲಾತಿಯನ್ನು ಜಾರಿಗೆ ತಂದರು ಇದರಿಂದಾಗಿ ಮೀಸಲಾತಿಯ ಜನಕ ಎಂದೇ ಕರೆಯಲಾಗುತ್ತಿದೆ. 1921 ರಲ್ಲಿ ಡಾ ಅಂಬೇಡ್ಕರರಿಗೆ ಪಂಡಿತ್ ಎಂಬು ಬಿರುದು ನೀಡಿದ್ದಲ್ಲದೇ ಅವರಿಗೆ ಪತ್ರ ಬರೆಯುವಾಗಲೆಲ್ಲಾ ಲೋಕಮಾನ್ಯ ಎಂದು ಸಂಭೋದಿಸುತ್ತಿದ್ದರು ಎಂದು ಹೇಳಿದರು.
ವೇದಿಕೆಯ ಮೇಲೆ ವಕೀಲರಾದ ಭೀಮಾ ಕಾಂಬಳೆ, ಸಂಪಾದಕರಾದ ಗೋಪಾಳ ಗವಡಾ, ಆನಂದ ಶಿಂಗೆ, ಮನೋಹರ ಕಾಂಬಳೆ, ವಿಲಾಸ ಕಾಂಬಳೆ, ವಕೀಲರಾದ ನಿಂಗಪ್ಪ ಭಜಂತ್ರಿ ಹಾಗೂ ಬಾಳಕೃಷ್ಣ ಕಾಂಬಳೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.