ರಾಜ್ಯ ವಿಧಾನಸಭೆ ಚುನಾವಣೆ ವೇಳೆಗೆ 12 ಸಚಿವರ ಸಿಡಿ ರಿಲೀಸ್ – ಸಿ.ಎಂ ಇಬ್ರಾಹಿಂ ಹೊಸಬಾಂಬ್

ಬಾಗಲಕೋಟೆ: ಕೋಟಿ ಕೋಟಿ ಕೊಟ್ಟು ಮಂಚ ಹತ್ತಿದವರಿಗೆ ವಿಧಾನಸಭೆ ಚುನಾವಣೆ ವೇಳೆಗೆ ಶಾಕ್ ಸಿಗೋದು ಗ್ಯಾರಂಟಿ. ಮುಂಬರುವ ವಿಧಾನಸಭೆ ಚುನಾವಣೆಯ ವೇಳೆಗೆ ರಾಜ್ಯದ 12 ಸಚಿವರ ಸಿಡಿಗಳು ಹೊರಬರಲಿದ್ದಾವೆ ಎಂಬುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸ್ಪೋಟಕ ಬಾಂಬ್ ಸಿಡಿಸಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಾಡಿದಂತ ಅವರು, 30 ಕೋಟಿ ಕೊಟ್ಟು ಮಂಚ ಏರಿದವರ ಸಿಡಿಗಳಿದ್ದಾವೆ. ಆದ್ರೇ.. ಅವರೆಲ್ಲಾ ಈಗ ಸ್ಟೇ ತಗೊಂಡಿದ್ದಾರೆ. ನಾನೇ ಸಭಾಪತಿಗಳಿಗೆ ಸಿಡಿಯಲ್ಲಿ ಏನಿದೆ ನೋಡಿ ಅಂದಿದ್ದೆ ಎಂದರು.
ಸದಾನಂದಗೌಡ್ರು ಸ್ಟೇ ತಗೊಂಡಿದ್ದಾರೆ. ರಾಜ್ಯದ 12 ಮಂತ್ರಿಗಳು ಸ್ಟೇ ತಗೊಂಡಿದ್ದಾರೆ. ಆದ್ರೇ.. ವಿಧಾನಸೌಧದಲ್ಲಿ ಮಾತ್ರ ಗೌರವಾನ್ವಿತರಂತೆ ಮಾತನಾಡ್ತಾರೇ ಛೇ.. ಎಂಬುದಾಗಿ ವಾಗ್ದಾಳಿ ನಡೆಸಿದರು.
ಕಾದು ನೋಡಿ.. ವಿಧಾನಸಭೆ ಚುನಾವಣೆಯ ವೇಳೆಗೆ 12 ಸಚಿವರ ಸಿಡಿಗಳು ಹೊರ ಬರ್ತಾವೆ. ಈಗ ಸ್ಟೇ ಇದೆ. ಅವರಲ್ಲಿ ಗೋಪಾಲ ಒಬ್ಬ ಮಾತ್ರ ಹೈಟ್, ವೇಟ್ ಗೆ ಏನೂ ಮಾಡಾಕಾಗಲ್ಲ ಅಂತ ಸ್ಟೇ ತಗೊಂಡಿಲ್ಲ ಎಂಬುದಾಗಿ ಲೇವಡಿ ಮಾಡಿದರು.