Crime News
ರೈತನಿಂದ ಲಂಚ ಪಡೆಯುತ್ತಿದ್ದ ಲೈನ್ ಮನ್ ಎಸಿಬಿ ಬಲೆಗೆ

ಅಕ್ರಮ ಸಕ್ರಮ ಯೋಜನೆಯಡಿ ಟಿಸಿ ಕೊಡಲು ರೈತನಿಂದ ಲಂಚ ಪಡೆಯುತ್ತಿದ್ದ ಲೈನ್ ಮನ್ ಎಸಿಬಿ ಬಲೆಗೆ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಮರಗೂರ ಕ್ರಾಸ್ ಬಳಿಯ ಬಸ್ ನಿಲ್ದಾಣದಲ್ಲಿ ನಡೆದಿದೆ.
ಲೈನ್ ಮನ್ ಸಂಜೀವ ಶಿವಲಿಂಗಪ್ಪ ಅಂಬಿ ಬಂಧಿತ ಆರೋಪಿ. ರೈತನಿಗೆ ಟಿಸಿ ಕೊಡಲು ಬರೋಬ್ಬರಿ 25 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದ. ಮರಗೂರ ಕ್ರಾಸ್ ಬಳಿಯ ಬಸ್ ನಿಲ್ದಾಣದಲ್ಲಿ ರೈತನಿಂದ ಹಣ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ. ವಿಜಯಪುರ ಎಸಿಬಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.