Reliance Jio: ಮುಕೇಶ್ ಅಂಬಾನಿ ರಾಜೀನಾಮೆ: ಜಿಯೋ ಬೆಳವಣಿಗೆಗೆ ಆಕಾಶ್ ಅಂಬಾನಿ ಕೊಡುಗೆ ಆಕಾಶ್ ಅಂಬಾನಿ ಅಧ್ಯಕ್ಷ

ರಿಲಾಯನ್ಸ್ ಸಮೂಹ ಸಂಸ್ಥೆಗಳ ಡಿಜಿಟಲ್ ಸೇವೆಗಳು ಮತ್ತು ರಿಲಯನ್ಸ್ ಗ್ರೂಪ್‌ನ ಗ್ರಾಹಕ ಚಿಲ್ಲರೆ ವ್ಯವಹಾರಗಳ ಬೆಳವಣಿಗೆಯ ಜೊತೆಗೆ ಆಕಾಶ್ ಅಂಬಾನಿ ಅವರು ಈಗಾಗಲೇ ತಮ್ಮನ್ನು ನಿಕಟವಾಗಿ ತೊಡಗಿಸಿಕೊಂಡಿದ್ದಾರೆ. ಈಗ 500 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರಿಗೆ ಡಿಜಿಟಲ್ ಮತ್ತು ಹೆಚ್ಚಿನ ಒಳಗೊಳ್ಳುವಿಕೆಯೊಂದಿಗೆ ‘ಒಮ್ಮುಖ ಲಾಭಾಂಶ’ದ ಸೃಷ್ಟಿಗೆ ಮುಂದಾಗಿದ್ದಾರೆ.
ನಿರ್ದಿಷ್ಟ ಕೊಡುಗೆಗಳನ್ನು ಗುರುತಿಸಿ ಈ ಹುದ್ದೆ
ಡಿಜಿಟಲ್ ಸೇವೆಗಳ ಪ್ರಯಾಣಕ್ಕೆ ಆಕಾಶ್ ಅಂಬಾನಿ ಅವರು ನೀಡಿರುವ ನಿರ್ದಿಷ್ಟ ಕೊಡುಗೆಗಳನ್ನು ಗುರುತಿಸಿ ರಿಲಯನ್ಸ್ ಜಿಯೋ ಇನ್ಫೋಕಾಮ್‌ನ ಅಧ್ಯಕ್ಷರಾಗಿ ಜವಾಬ್ದಾರಿ ನೀಡಲಾಗಿದೆ. ಈ ಉನ್ನತ ಮಟ್ಟದ ಜವಾಬ್ದಾರಿಯೂ ಸೇರಿ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಜವಾಬ್ದಾರಿಗಳಿಗೆ ಭಾಜನರಾಗಲಿದ್ದಾರೆ.
ರಿಲಯನ್ಸ್ ಜಿಯೋ ಇನ್ಫೋಕಾಮ್ ಸೇರಿದಂತೆ ಎಲ್ಲಾ ಜಿಯೋ ಡಿಜಿಟಲ್ ಸೇವಾ ಬ್ರ್ಯಾಂಡ್‌ಗಳನ್ನು ಹೊಂದಿರುವ ಪ್ರಮುಖ ಕಂಪನಿಯಾದ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಅಧ್ಯಕ್ಷರಾಗಿ ಮುಖೇಶ್ ಅಂಬಾನಿಯವರು ಮುಂದುವರಿಯಲಿದ್ದಾರೆ.
2G ನಿಂದ 4G ಗೆ
ಜಿಯೋದ 4G ನೆಟ್ವರ್ಕ್ ಸುತ್ತ ಡಿಜಿಟಲ್ ಪರಿಸರ ವ್ಯವಸ್ಥೆಯ ರಚನೆಯಲ್ಲಿ ಆಕಾಶ್ ಅಂಬಾನಿಯವರು ನಿಕಟವಾಗಿ ತೊಡಗಿಸಿಕೊಂಡಿದ್ದಾರೆ. ಅವರು 2017 ರಲ್ಲಿ ಭಾರತ-ಸ್ಪೆಕ್ಸ್ ಫೋಕಸ್ಡ್ ಜಿಯೋಫೋನ್ ಅನ್ನು ಆವಿಷ್ಕರಿಸುವ ಮತ್ತು ಬಿಡುಗಡೆ ಮಾಡುವಲ್ಲಿ ಇಂಜಿನಿಯರ್‌ಗಳ ತಂಡದೊಂದಿಗೆ ನಿಕಟವಾಗಿ ತೊಡಗಿಸಿಕೊಂಡಿದ್ದರು. ಈ ಬೆಳವಣಿಗೆಯು ಭಾರತೀಯರನ್ನು 2G ನಿಂದ 4G ಗೆ ಕರೆದೊಯ್ಯಲು ಸಾಕಷ್ಟು ಕ್ರಾಂತಿಕಾರಿ ಸಾಧನವಾಯಿತು.
AI-ML ಮತ್ತು ಬ್ಲಾಕ್ಚೈನ್ನಲ್ಲಿ ಅಭಿವೃದ್ಧಿ
ಕಳೆದ ಕೆಲವು ವರ್ಷಗಳಲ್ಲಿ ಡಿಜಿಟಲ್ ಜಾಗದಲ್ಲಿ ಜಿಯೋ ಕೈಗೊಂಡ ಪ್ರಮುಖ ಸ್ವಾಧೀನಗಳನ್ನು ಅವರು ವೈಯಕ್ತಿಕವಾಗಿ ಮುನ್ನಡೆಸಿದ್ದಾರೆ. AI-ML ಮತ್ತು ಬ್ಲಾಕ್‌ಚೈನ್ ಸೇರಿದಂತೆ ಹೊಸ ತಂತ್ರಜ್ಞಾನಗಳು ಮತ್ತು ಸಾಮರ್ಥ್ಯಗಳ ಅಭಿವೃದ್ಧಿಯಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದಾರೆ.
2020 ರಲ್ಲಿ ಟೆಕ್ ಮೇಜರ್‌ಗಳು ಮತ್ತು ಹೂಡಿಕೆದಾರರಿಂದ ಜಾಗತಿಕ ಹೂಡಿಕೆಯ ಜಾಡು ಹಿಡಿಯುವಲ್ಲಿ ಆಕಾಶ್ ಅಂಬಾನಿಯವರು ನಿರಂತರವಾಗಿ ತೊಡಗಿಸಿಕೊಂಡಿದ್ದರು. ಇದು ಜಿಯೋವನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಬೆಳವಣಿಗೆಗೆ ಕಾರಣವಾಯಿತು.
ತಂತ್ರಜ್ಞಾನವನ್ನು ಸಮಸ್ಯೆಗಳ ಪರಿಹಾರಕ್ಕೆ ಬಳಕೆ
ಆಕಾಶ್ ಅಂಬಾನಿಯವರು ಹೊಸತನ ಮತ್ತು ತಂತ್ರಜ್ಞಾನದ ಅತ್ಯಾಧುನಿಕ ವ್ಯವಸ್ಥೆಗಳಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸುವ ನಿರೀಕ್ಷೆಯಿದೆ. ಅದು ತಂತ್ರಜ್ಞಾನವನ್ನು ಸಮಸ್ಯೆಗಳ ಪರಿಹಾರಕ್ಕೆ ಬಳಸಿಕೊಳ್ಳುವುದಕ್ಕೆ ಇಂಬು ನೀಡಲಿದೆ. ಜೊತೆಗೆ ಡೇಟಾ ಮತ್ತು ತಂತ್ರಜ್ಞಾನದ ಶಕ್ತಿಯನ್ನು ಎಲ್ಲರಿಗೂ ಸುಲಭವಾಗಿ ಪ್ರವೇಶಿಸುವಂತೆ ಮಾಡುತ್ತದೆ.
ಬ್ರೌನ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಮೇಜರ್ ಪದವಿ
ಆಕಾಶ್ ಅಂಬಾನಿಯವರು ಬ್ರೌನ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಮೇಜರ್ ಪದವಿ ಪಡೆದಿದ್ದಾರೆ. ಭಾರತವನ್ನು ಹೆಚ್ಚು ಒಳಗೊಂಡಿರುವ, ಹೆಚ್ಚು ಡಿಜಿಟಲ್ ಸಮಾಜವಾಗಿ ನಿರ್ಮಿಸಲು ಅವರು ಜಿಯೋದ ಪ್ರಯತ್ನಗಳನ್ನು ಮುಂದುವರಿಸುತ್ತಾರೆ.