InternationalNationalSports
ವೇಗದ ಚಾಲನೆ; ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ 1,500 ರೂ ದಂಡ

ಕರಾಚಿ: ಕರಾಚಿಯಿಂದ ಲಾಹೋರ್‌ಗೆ ಹೋಗುವ ವೇಳೆ ವೇಗವಾಗಿ ವಾಹನ ಚಲಾಯಿಸಿದ ಕಾರಣಕ್ಕಾಗಿ ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರಿಗೆ ಮೋಟಾರ್‌ವೇ ಪೊಲೀಸರು ದಂಡ ವಿಧಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘಿ ಸಿದ ಅಪರಾ ಧಕ್ಕಾಗಿ ಅವರು 1,500 ರೂ.
ದಂಡ ಪಾವತಿಸಿದರು. ಕ್ರೀಡಾ ತಾರೆಯಾಗಿದ್ದರೂ ದಂಡ ಪಾವತಿಸ ಬೇಕೆಂಬ ಮೋಟಾರ್‌ವೆà ಪೊಲೀಸರ ಕ್ರಮಕ್ಕೆ ಅಫ್ರಿದಿ ಮೆಚ್ಚುಗೆ ವ್ಯಕ್ತಪಡಿಸಿದರು.
ದಂಡ ಪಾವತಿಸಿದ ಬಳಿಕ ಪೊಲೀಸ್ ಸಿಬಂದಿ ಜತೆ ಸೆಲ್ಫಿ ತೆಗೆದುಕೊಂಡ ಅಫ್ರಿದಿ ಅವರು ಕಾನೂನು ಎಲ್ಲರಿಗೂ ಸಮಾನ ಎಂದು ತಿಳಿಸಿದರು.