ಗೋಲಿಹಳ್ಳಿ ವಲಯ ಅರಣ್ಯ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ಸದಸ್ಯ ರುದ್ರಪ್ಪ ಬೆಂಡಿಗೇರಿ ಮನವಿ

ಕಾಡು ಪ್ರಾಣಿಗಳಿಂದ ಆಗಿರುವ ಬೆಳೆ ಹಾನಿ ಬಗ್ಗೆ ಪರಿಹಾರ ಧನ ಕೊಡಬೇಕು ಅಂತ ಗೋಲಿಹಳ್ಳಿ ವಲಯ ಅರಣ್ಯ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ಸದಸ್ಯ ರುದ್ರಪ್ಪ ಬೆಂಡಿಗೇರಿ ಮನವಿ
ಬೆಳಗಾವಿ ಜಿಲ್ಲೆ ಖಾನಾಪೂರ : ತಾಲೂಕಿನ ಗೋಲಿಹಳ್ಳಿ ವಲಯ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳ ರೈತರ ಕೃಷಿ ಜಮೀನುಗಳು ಅರಣ್ಯಕ್ಕೆ ಹೊಂದಿಕೊಂಡು ಇದ್ದು , ಸದರಿ ಜಮೀನುಗಳಲ್ಲಿ ರೈತರು ಕಷ್ಟಪಟ್ಟು ಬೆಳೆದ ಕಬ್ಬು , ಭತ್ತ , ಮತ್ತು ಇನ್ನಿತರ ಬೆಳೆಗಳು ಫಸಲು ಕಟಾವಿಗೆ ಬರುವ ಸಮಯದಲ್ಲಿಯೇ ಕಾಡುಪ್ರಾಣಿಗಳ ದಾಳಿಯಿಂದಾಗಿ ಸತತವಾಗಿ ಬೆಳೆ ನಾಶವಾಗುತ್ತಿದೆ . ಇದರಿಂದಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸಬೇಕಾಗುತ್ತದೆ . ಮತ್ತು ರೈತರಿಗೆ ಸೂಕ್ತ ಸಮಯದಲ್ಲಿ ಪರಿಹಾರ ದೊರಕದೇ ಇರುವುದರಿಂದ ರೈತರು ಆರ್ಥಿಕವಾಗಿ ಬಹಳಷ್ಟು ಲುಕ್ಸಾನ್ ಆಗ್ತಾ ಇದ್ದಾರೆ ಮತ್ತು ಅನಿವಾರ್ಯವಾಗಿ ಆತ್ಮಹತ್ಯೆಯಂತಹ ದಾರಿಗಳನ್ನು ಹುಡುಕುತ್ತಾರೆ .
ಆದರಿಂದ ಮುಂಜಾಗ್ರತಿ ಕ್ರಮ ಗೋಸ್ಕರ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗನೇ ಈ ವಿಷಯದ ಬಗ್ಗೆ
ಗಂಭೀರವಾಗಿ ಪರಿಗಣಿಸಿ ರೈತರ ಬೆಳೆ ನಾಶ ಆಗಿರುವ ಬಗ್ಗೆ ಸರಕಾರದಿಂದ ಬಂದಂತಹ ಪರಿಹಾರ ಧನವನ್ನು ಸೂಕ್ತ ಸಮಯದಲ್ಲಿ ನೀಡಬೇಕು.
ಆತ್ಮಹತ್ಯೆ ಮಾಡುವಂತ ದಾರಿಗಳಿಗೆ ಕಡಿವಾಣ ಹಾಕ್ಬೇಕು .ಮತ್ತು ನಮ್ಮ ಗೋಲಿಹಳ್ಳಿ ರೇಂಜಿ ಆಫೀಸಿಗೆ ವಿಶೇಷ ಪ್ಯಾಕೇಜ್ ರೂಪಿಸಿ ಕೊಡಬೇಕು. ಮತ್ತು ಇದಕ್ಕೆ ಶಾಶ್ವತವಾದ ಪರಿಹಾರವನ್ನು ಮಾಡಿಕೊಡಬೇಕೆಂದು ಸಮಸ್ತ ಎಲ್ಲ ಗ್ರಾಮಗಳ ರೈತರ ಪರವಾಗಿ ಗ್ರಾಮ ಪಂಚಾಯತಿ ಸದಸ್ಯ ರುದ್ರಪ್ಪ ಯಲ್ಲಪ್ಪ ಭೆಂಡಿಗೆರಿ. ಇವರು ಗೊಳಿಹಳ್ಳಿ ವಲಯ ಅರಣ್ಯಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ರುದ್ರಪ್ಪ ಬೆಂಡಿಗೇರಿ , ಗಷ್ಟೋಲಿ ಗ್ರಾಮದ ಸಮಾಜ ಸೇವಕ ಆದಂತಹ ಶಂಕರ್ ಬಾಗವಾಡ್ಕರ, ಜ್ಯೋತಿಬಾ ಬೆಂಡಿಗೇರಿ. ರವಿ ಮಾದಾರ್, ಮತ್ತು ಗಷ್ಟೋಲಿ ದಡ್ಡಿ ಗ್ರಾಮದ ಸಮಾಜ ಸೇವಕ ಆದಂತಹ ಸಂದೀಪ್ ತಿಪ್ಪಣ್ಣವರ್, ಸಹಾ ಉಪಸ್ಥಿತರಿದ್ದರು
ವರದಿಗಾರರು
ಜೋತಿಬಾ ಭೆಂಡಿಗೆರಿ