National
Big news: ಬಾಲಿವುಡ್ ನಟಿ ʻಸ್ವರಾ ಭಾಸ್ಕರ್ʼಗೆ ಕೊಲೆ ಬೆದರಿಕೆ.

ಮುಂಬೈ: ಬಾಲಿವುಡ್ ನಟಿ ಸ್ವರಾ ಭಾಸ್ಕರ್(Actor Swara Bhasker) ಅವರಿಗೆ ಪತ್ರವೊಂದರಲ್ಲಿ ಕೊಲೆ ಬೆದರಿಕೆ ಹಾಕಲಾಗಿದ್ದು, ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ವರ್ಸೊವಾದಲ್ಲಿರುವ ನಟಿಯ ನಿವಾಸಕ್ಕೆ ಪತ್ರವನ್ನು ಕಳುಹಿಸಲಾಗಿದ್ದು, ಪತ್ರದ ಸಮೇತ ಪಿಲೀಸ್ ಠಾಣೆಗೆ ಭೇಟಿ ನೀಡದ ಸ್ವರಾ ಭಾಸ್ಕರ್ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ನಾವು ಅಪರಿಚಿತ ವ್ಯಕ್ತಿಗಳ ವಿರುದ್ಧ ನಾನ್-ಕಾಗ್ನೈಸಬಲ್ ಅಪರಾಧವನ್ನು ದಾಖಲಿಸಿದ್ದು, ತನಿಖೆ ಮುಂದುವರೆಸಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದಿಯಲ್ಲಿ ಬರೆದಿರುವ ಪತ್ರದಲ್ಲಿ ʻವೀರ ಸಾವರ್ಕರ್ ಅವರ ಅವಮಾನವನ್ನು ದೇಶದ ಯುವಕರು ಸಹಿಸುವುದಿಲ್ಲʼ ಎಂದು ಉಲ್ಲೇಖಿಸಿದ್ದಾರೆ.