Karnataka News
ಬೆಳಗಾವಿಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಪೆಟ್ರೋಲ್ ಟ್ಯಾಂಕರ್ ಧಾರವಾಡದಲ್ಲಿ ಭೀಕರ ದುರಂತ : ಪೆಟ್ರೋಲ್ ಟ್ಯಾಂಕರ್ ಗೆ ಬೆಂಕಿ ಹತ್ತಿ ಇಬ್ಬರು ಸಜೀವ ದಹನ

ಧಾರವಾಡ :ಧಾರವಾಡ ಬೈಪಾಸ್ ಯರಿಕೊಪ್ಪ ಬಳಿ ತಡರಾತ್ರಿ ಭೀಕರ ದುರಂತವೊಂದು ಸಂಭವಿಸಿದ್ದು, ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್ ಗೆ ಬೆಂಕಿ ಹತ್ತಿ ಇಬ್ಬರು ಸಜೀವ ದಹನವಾಗಿರುವ ಘಟನೆ ನಡೆದಿದೆ.
ದಾರವಾಡದ ಯರಿಕೊಪ್ಪ ಬಳಿ ಬೆಳಗಾವಿಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಪೆಟ್ರೋಲ್ ಟ್ಯಾಂಕರ್ ಲಾರಿ ಎದುರಿನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಟ್ಯಾಂಕರ್ ಉರುಳಿ ಬಿದ್ದಿದೆ. ಆಗ ಟ್ಯಾಂಕರ್ ನಲ್ಲಿದ್ದ ಪೆಟ್ರೋಲ್ ಸೋರಿಕೆಯಾಗಿ ಹೊತ್ತಿದ ಬೆಂಕಿ ಇಡೀ ಟ್ಯಾಂಕರ್ ಗೆ ಆವರಿಸಿದೆ. ಈ ವೇಳೆ ಟ್ಯಾಂಕರ್ ನಲ್ಲಿದ್ದ ಇಬ್ಬರು ಸಜೀವ ದಹನವಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಟ್ಯಾಂಕರ್ ಚಾಲಕ ಸೇರಿ ಇಬ್ಬರು ಸಜೀವ ದಹನವಾಗಿದ್ದಾರೆ.