
ಕೋಲಾರ: ಗ್ರಾಹಕನೋರ್ವ ಹೋಟೆಲ್ ಒಂದರಲ್ಲಿ ಚಿಕನ್ ಲೆಗ್ ಪೀಸ್ ಪಾರ್ಸೆಲ್ ತೆಗೆದುಕೊಂಡು ಮನೆಯಲ್ಲಿ ತೆಗೆದಾಗ ಚಿಕನ್ನಲ್ಲಿ ಹುಳ ಪತ್ತೆಯಾಗಿರುವ ಘಟನೆ ಕೆಜಿಎಫ್ ನಗರದ ಪಿಚರ್ಡ್ ರಸ್ತೆಯಲ್ಲಿರುವ ಇಖ್ರಾ ಹೋಟೆಲ್ ನಲ್ಲಿ ಪತ್ತೆಯಾಗಿದೆ.
ಕೆಜಿಎಫ್ ನಗರದ ವಿನೋದ್ ಎಂಬುವವರು ತೆಗೆದುಕೊಂಡ ಚಿಕನ್ ಲೆಗ್ ಪೀಸ್ನಲ್ಲಿ ಹುಳ ಪತ್ತೆಯಾಗಿದೆ. ಗ್ರಾಹಕ ಚಿಕನ್ ಪೀಸ್ ಸಮೇತ ಹೋಟೆಲ್ಗೆ ಬಂದು ಮಾಲೀಕರನ್ನ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.
ಈ ವೇಳೆ ಪರಿಶೀಲಿಸಿದಾಗ ಹೋಟೆಲ್ನ ಮತ್ತಷ್ಟು ಚಿಕನ್ ಪೀಸ್ ನಲ್ಲೂ ಹುಳ ಪತ್ತೆಯಾಗಿದೆ. ಸ್ಥಳಕ್ಕೆ ನಗರಸಭೆ ಆಹಾರ ನಿರೀಕ್ಷಕರು ಭೇಟಿ ನೀಡಿದ್ದು, ಹೋಟೆಲ್ಗೆ ಬೀಗ ಮುದ್ರೆ ಜಡಿದಿದ್ದಾರೆ.