ರಾಜ್ಯದಲ್ಲೊಂದು ಘೋರ ಘಟನೆ: ವಿಚ್ಛೇದನ ನೀಡದಿದ್ದಕ್ಕೇ ಪತ್ನಿ ಕುಟುಂಬಸ್ಥರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ

ಯಾದಗಿರಿ: ಜೆಸಿಪಿ ಚಾಲಕನಾಗಿ ಕೆಲಸ ಮಾಡುತ್ತಿದ್ದಂತ ಆತ, ಪತ್ನಿಯಿಂದ ದೂರವಾಗಿದ್ದನು. ಇದೇ ಸಿಟ್ಟಿನಲ್ಲಿ ಸಿಟ್ಟಾದಂತ ಆತ, ಪತ್ನಿಯ ಕುಟುಂಬಸ್ಥರ ಮೇಲೆ ಪೆಟ್ರೋಲ್ ಸುರಿದು ಇಡೀ ಕುಟುಂಬಸ್ಥರಿಗೆ ಬೆಂಕಿ ಹಚ್ಚಿರೋ ಘೋರ ಘಟನೆ ಯಾದಗಿರಿ ಜಿಲ್ಲೆಯ ಕೊಡೆಕಲ್ ಸಮೀಪದ ನಾರಾಯಣಪುರದಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಕೊಡೆಕಲ್ ಬಳಿಯಲ್ಲಿನ ನಾರಾಯಾಣಪುರದಲ್ಲಿ ವಾಸಿಸುತ್ತಿದ್ದಂತ ಜೆಸಿಬಿಯ ಚಾಲಕ ಶರಣಪ್ಪ ಹಾಗೂ ಕೆ ಎಸ್ ಆರ್ ಟಿಸಿಯಲ್ಲಿ ಮೆಕ್ಯಾನಿಕಲ್ ಆಗಿ ಕೆಲಸ ನಿರ್ವಹಿಸುತ್ತಿರುವಂತ ಪತ್ನಿ ನಡುವೆ ಜಗಳ ಉಂಟಾಗಿತ್ತು. 14 ದಿನಗಳಿಂದ ಪತಿ-ಪತ್ನಿಯರಿಬ್ಬರು ದೂರಾಗಿದ್ದರು.
ಮದುವೆಯಾದಾಗಿನಿಂದಲೂ ಶರಣಪ್ಪ ಮಾವ ಶರಣಪ್ಪ ಸರೂರ ಅವರನ್ನು, ಪತ್ನಿಯ ಹೆಸರಿನಲ್ಲಿರುವಂತ ಮನೆಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದನು. ಇದೇ ಕಾರಣಕ್ಕೆ ಆಗಾಗ ಜಗಳ ಕೂಡ ಆಗುತ್ತಿತ್ತು.
ನಿನ್ನೆ ಪತ್ನಿಗೆ ಕರೆ ಮಾಡಿ, ಮಾತುಕತೆಗೆ ಬರುವಂತೆ ಸೂಚಿಸಿದ್ದನು. ಆದ್ರೇ ಅಳಿಯನ ಮಾತಿನ ಮೇಲೆ ನಂಬಿಕೆ ಇಲ್ಲದಂತ ಮಾವ, ಮಗಳು, ಮೊಮ್ಮಗಳನ್ನು ಮನೆಯಲ್ಲಿಯೇ ಬಿಟ್ಟು ಮಗ, ತಂದೆ ಸಿದ್ರಾಮಪ್ಪ ಮುರಾಳ, ಅಣ್ಣ ಮುತ್ತಾಪ್ಪ ಮುರಾಳರೊಂದಿಗೆ ಆರೋಪಿ ಶರಣಪ್ಪ ಕರೆದಂತೆ ಮಾತುಕತೆಗೆ ನಿನ್ನೆ ತೆರಳಿದ್ದರು.
ಹೀಗೆ ತೆರಳಿದವರನ್ನು ಕೋಣೆಯಲ್ಲಿ ಕೂಡಿ ಹಾಕಿದಂತ ಶರಣಪ್ಪ, ಅವರ ಕೋಣೆಯ ತುಂಬಾ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಮೊದಲು ನಾಲ್ಕು ಲೀಟರ್ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದರೂ ಸರಿಯಾಗಿ ಸುಡದ ಕಾರಣ, ಆನಂತ್ರ ಮತ್ತೆ ಮೂರು ಲೀಟರ್ ಪೆಟ್ರೋಲ್ ತಂದು ಸುರಿದು ಬೆಂಕಿ ಹಚ್ಚಿದ್ದಾನೆ. ಶೇ.80ರಷ್ಟು ಸುಟ್ಟಗಾಯಗಳಿಂದ ಶರಣಪ್ಪ ಪತ್ನಿಯ ಅಳಿಯ ನಾಗಪ್ಪ, ಮಾಪ ಶರಣಪ್ಪ ಸರೂರ, ತಂದೆ ಸಿದ್ರಾಮಪ್ಪ ಮುರಾಳ, ಅಣ್ಣ ಮುತ್ತಪ್ಪ ಮುರಾಳ ಸಾವನ್ನಪ್ಪಿದ್ದಾರೆ.