Crime News
ಒಟ್ಟಿಗೆ ಊಟ ಮಾಡಿ ಮಲಗಿದ್ದ ಮಾಲೀಕರನ್ನು ಹೊಡೆದು ಹತ್ಯೆ

ಗದಗ: ಮನೆಗೆಲಸದ ವ್ಯಕ್ತಿಯೊಬ್ಬ ಮಾಲೀಕರನ್ನು ಹತ್ಯೆಗೈದ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಗ್ರಾಮದ ಫಕೀರೇಶ ಮಾಚೇನಹಳ್ಳಿ (17) ಮಹಾಂತೇಶ್ ಮಾಚೇನಹಳ್ಳಿ (28) ಕೊಲೆಗೀಡಾದ ದುರ್ದೈವಿಗಳು.
ಅಲಗಿಲವಾಡ ಗ್ರಾಮದ ನಿವಾಸಿ ಮಂಜುನಾಥ್ (40) ಕೊಲೆ ಮಾಡಿದ ಆರೋಪಿ.
ಗುರುವಾರ ರಾತ್ರಿ ಮಾಲೀಕರ ಜೊತೆ ಬಾಡೂಟ ಸವಿದ ಮಂಜುನಾಥ ಮನೆಯ ಮಹಡಿಯಲ್ಲಿ ಮಾಲೀಕರ ಪಕ್ಕದಲ್ಲಿಯೇ ಮಲಗಿದ್ದರು. ಬೆಳಗಿನ ಜಾವ ಕೋಲಿನಿಂದ ಮುಖ ಹಾಗೂ ತಲೆಗೆ ಬಿರುಸಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಆರಂಭಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಸಿಪಿಐ ವಿಕಾಸ್ ಲಮಾಣಿ ಪಿಎಸ್‌ಐ ಪ್ರವೀಣ್ ಗಂಗೋಳ ಭೇಟಿ ನೀಡಿ ಪರಿಶೀಲಿಸಿದರು.