Double Murder: ಜೊತೆಯಲ್ಲಿ ಚಿಕನ್ ತಿಂದ, ಜೊತೆಯಲ್ಲೇ ಮಲಗಿದ್ದ; ಕೊಲೆ ಮಾಡಿ ಸ್ಥಳದಲ್ಲೇ ಇದ್ದ ಮಂಜುನಾಥ

ಕೊಲೆಗಾರ ಜೊತೆಯಲ್ಲೇ ಮಲಗಿದ್ದ..!?
ಶಿರಹಟ್ಟಿ ತಾಲೂಕಿನ ಅಲಗಿಲವಾಡದಲ್ಲಿದ್ದ ಮಂಜುನಾಥ್ ನನ್ನ ಮಾಂತೇಶ್ ನಿನ್ನೆ ಸಂಜೆ ಗ್ರಾಮಕ್ಕೆ ಕರೆದುಕೊಂಡು ಬಂದಿದ್ರು. ಹುಷಾರಿಲ್ಲ ಅನ್ನೋ ಕಾರಣಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡೆಸಿದ್ರು. ಮಾಂತೇಶ್ ನ ತಾಯಿ ಪಕ್ಕೀರವ್ವ ಮೂವರಿಗೆ ಚಿಕನ್ ಸಾರು, ರೊಟ್ಟಿ ಮಾಡಿ ಹೊಟ್ಟೆ ತುಂಬಾ ಊಟ ಬಡಿಸಿದ್ದಾರೆ. ಊಟ ಮಾಡಿದ ಮಾಂತೇಶ್, ಫಕ್ಕೀರೇಶ್, ಮಂಜುನಾಥ್ ಮನೆ ಮಾಳಿಗೆ ಮೇಲೆ ಮಲಗಲು ಹೋಗಿದ್ರು. ಆರೋಪಿ ಮಂಜುನಾಥ್ ಇಬ್ಬರು ಮಲಗುವವರೆಗೆ ಕಾಯ್ದು ಕೂತಿದ್ದ. ಮೂರು ಗಂಟೆಗೆ ಸುಮಾರಿಗೆ ನಿದ್ದೆಗೆ ಜಾರಿದ್ದ ಮಾಂತೇಶ್ ನ ತಲೆಗೆ ಅಲ್ಲೇ ಇದ್ದ ದೊಣ್ಣೆಯಿಂದ ಹೊಡೆದ ತಕ್ಷಣ ಮಾಂತೇಶ್ ಚೀರುತ್ತಿದ್ದಂತೆಯೇ ಪಕ್ಕದಲ್ಲಿಯೇ ಮಲಗಿದ್ದ ಫಕ್ಕೀರೇಶ್ ಎಚ್ಚರವಾಗಿ ಕೂಗುತ್ತಿದ್ದಂತೆಯೇ ಆತನ ಮೇಲೂ ಬಡಿಗೆಯಿಂದ ಜೋರಾಗಿ ತಲೆ, ಭುಜಕ್ಕೆ ಹೊಡಿದಿದ್ದಾನೆ. ಮಲಗಿದಲ್ಲೇ ಇಬ್ಬರು ಯುವಕರ ಉಸಿರು ಚೆಲ್ಲಿದ್ರು.
ಆರೋಪಿ ಮಂಜುನಾಥ್
ಕೊಲೆ ಮಾಡಿ ಸ್ಥಳದಲ್ಲೇ ಇದ್ದ ಮಂಜುನಾಥ
ಹತ್ಯೆ ಮಾಡಿದ್ದ ಆರೋಪಿ ಮಂಜುನಾಥ ಬರೋಬ್ಬರಿ ಒಂದು ಗಂಟೆಗಳ ಕಾಲ ಮೆಟ್ಟಿಲ ಮೇಲೆ ಕೂತಿದ್ದಾನೆ. ದೊಣ್ಣೆಯಿಂದ ಕೆಲಕ್ಕೆ ಕುಟ್ಟುತ್ತ ಕೂತಿದ್ನಂತೆ. ಮಹಡಿ ಮೇಲೆನ ಸಪ್ಪಳ ಮಾಂತೇಶ್ ನ ತಾಯಿ ಪಕ್ಕೀರವ್ವನಿಗೆ ಕೇಳಿದೆ. ಮೇಲೆ ಹೋಗಿ ಏನಾಗಿದೆ ಅಂತಾ ನೋಡಲು ಹೋಗ್ಬೇಕೆನ್ನುಷಟ್ಟರಲ್ಲಿ ಮೆಟ್ಟಿಲ ಮೇಲಿದ್ದ ಹಂತಕ ಮಂಜುನಾಥ, ಮೇಲೆ ಬಂದ್ರೆ ಮತ್ತೊಂದು ಜೀವ ತೆಗೆಯುತ್ತೇನಿ ಅಂತಿದ್ನಂತೆ. ನಂತ್ರ ಗ್ರಾಮಸ್ಥರು ಆತನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಣದ ವಿಷಯವಾಗಿ ಕೊಲೆ ಶಂಕೆ
ಸದ್ಯ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದ್ರೆ, ಹಣದ ವಿಚಾರಕ್ಕೆ ಕೊಲೆ ನಡೆದಿದ್ಯಾ ಅನ್ನೋ ವಿಚಾರ ಚರ್ಚೆಯಲ್ಲಿದೆ. ಮಾಂತೇಶ್ ಕುರಿ ಸಾಕಾಣಿಕೆ ಮಾಡ್ಕೊಂಡಿದ್ದ.. ಕುರಿ ದೊಡ್ಡಿಯಲ್ಲಿ ಕೆಲಸ ಮಾಡೋದಕ್ಕೆ ಅಂತಾ ಮಂಜುನಾಥ ನನ್ನ ಕರೆದುಕೊಂಡು ಬಂದಿದ್ದ. ಸುಮಾರು ಎರಡು ವರ್ಷದ ಹಿಂದಿನಿಂದಲೂ ಮಂಜುನಾಥ ಕೆಲಸ ಮಾಡ್ಕೊಂಡು ಬಂದಿದ್ದ. ತಿಂಗಳಿಗೆ 15 ಸಾವಿರ ರೂಪಾಯಿಯಂತೆ ನಿಗಧಿಯಾಗಿತ್ತು. ಹಣದ ವಿಚಾರವಾಗಿ ಏನಾದ್ರೂ ಗಲಾಟೆ ನಡೆದಿತ್ತಾ ಅನ್ನೋ ಅನುಮಾನವೂ ಇದೆ.
ಇದಲ್ದೆ, ಬೇರೆ ಕಾರಣಗಳೂ ಇವೆ ಈ ಬಗ್ಗೆ ತನಿಖೆ ನಡೀತಿದೆ ಅಂತಾ ಎಸ್ ಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.ಸದ್ಯ ಶಿರಹಟ್ಟಿ ಪೊಲೀಸರ ವಶದಲ್ಲಿರುವ ಮಂಜುನಾಥ ನ ವಿಚಾರಣೆ ನಡೀತಿದೆ. ಕೊಲೆಗೆ ನಿಖರವಾದ ಕಾರಣ ಪತ್ತೆ ಹಚ್ಚಲಾಗ್ತಿದೆ.ಘಟನಾ ಸ್ಥಳಕ್ಕೆ ಎಸ್ಸಿ ಶಿವಪ್ರಕಾಶ್ ದೇವರಾಜ್ ಭೇಟಿ ನೀಡಿದ ಸಂದರ್ಭದಲ್ಲಿ ಕೊಲೆಯಾದ ಯುವಕರ ಸಂಬಂಧಿಕರು ಎಸ್ಪಿ ಅವರ ಕಾಲಿಗೆ ಬಿದ್ದು ಆರೋಪಿಗೆ ಗಲ್ಲು ಶಿಕ್ಷೆ ಕೊಡಿಸಿ ಎಂದು ಬೇಡಿಕೊಂಡರು. ಎಸ್ಪಿ ಅವರು ಸಹ ಕಾನೂನು ರೀತಿ ಆರೋಪಿಯ ಕೇಸ್ ಮಾಡುತ್ತೇವೆ ನಿಮ್ಮಗೆ ನ್ಯಾಯ ಕೊಡಸುತ್ತೇವೆ ಎಂದು ಭರವಸೆ ನೀಡಿದರು. .ಕೆರೆಹಳ್ಳಿ ಗ್ರಾಮದಲ್ಲಿ ಕೊಲೆಯಾದ ಸ್ಥಳಕ್ಕೆ ಗದಗ DCRB DSP ವಿಜಯ ಬಿರಾದರ, ಶಿರಹಟ್ಟಿ ಸಿಪಿಐ ವಿಕಾಸ್ ಲಮಾಣಿ, ಪಿಎಸ್ ಐ ಪ್ರಕಾಶ ಡಿ ಭೇಟಿ ನೀಡಿ ಪರಿಶೀಲನೆನ್ನೂ ನಡೆಸಿದ್ದು ಪ್ರಕರಣದ ಸ್ಪಷ್ಟತೆಗೆ ಖಾಕಿ ಟೀಮ್ ಫುಲ್ ಅಲರ್ಟ್ ಆಗಿದೆ.