ಊರಲ್ಲಿರುವ ಎಲ್ಲ ನಾಯಿಗಳನ್ನೂ ಪಾಲಿಕೆಯ ಕಚೇರಿಯೊಳಗೆ ನುಗ್ಗಿಸುತ್ತೇನೆ,” ಶಾಸಕ ಅಭಯ್ ಪಾಟೀಲ್

ಬೆಳಗಾವಿ : ಕಸ ಸಂಗ್ರಹ ಮಾಡಿಲ್ಲವೆಂದು ಹೋಗಲಿಲ್ಲವೆಂದು ಟ್ರ್ಯಾಕ್ಟರ್ ನಲ್ಲಿ ಕಸ ತಂದು ಮಹಾನಗರ ಪಾಲಿಕೆಯ ಆಯುಕ್ತರ ನಿವಾಸದ ಎದುರು ಎಸೆದಿದ್ದ ಶಾಸಕ ಅಭಯ್ ಪಾಟೀಲ್ ಈ ಬಾರಿ ಮತ್ತೊಂದು ಖಡಕ್ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಬೆಳಗಾವಿಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು ನಾಗರಿಕರು ಭೀತಿಯಿಂದ ಸಂಚರಿಸಬೇಕಾಗಿದೆ. ನಾಗರಿಕರು ಹಲವಾರು ಸಲ ಈ ಕುರಿತು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ,ಹೀಗಾಗಿ ಸಾರ್ವಜನಿಕರು ಶಾಸಕರ ಮೊರೆ ಹೋಗಿದ್ದಾರೆ.
ಇಂದು ಪಾಲಿಕೆಯ ಅಧಿಕಾರಿಗಳ ಸಭೆ ಕರೆದಿದ್ದ ಶಾಸಕ ಅಭಯ್ ಪಾಟೀಲ್ 15 ದಿನದೊಳಗೆ ಬೀದಿ ನಾಯಿಗಳ ಕಾಟದಿಂದ ಜನರನ್ನು ತಪ್ಪಿಸದಿದ್ದರೆ, ಊರಲ್ಲಿರುವ ಎಲ್ಲ ನಾಯಿಗಳನ್ನೂ ಪಾಲಿಕೆಯ ಕಚೇರಿಯೊಳಗೆ ನುಗ್ಗಿಸುತ್ತೇನೆ,” ಎಂಬ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಬೀದಿ ನಾಯಿಗಳನ್ನು ಕೊಲ್ಲಲು ಅನುಮತಿಯಿಲ್ಲ, ಆದರೆ ಅವುಗಳ ಸಂಖ್ಯೆ ಹೆಚ್ಚದಂತೆ ಸಂತಾನ ಶಸ್ತ್ರ ಚಿಕಿತ್ಸೆ ಮಾಡಬಹುದು. ನೀವೇನು ಮಾಡುತ್ತಿರೋ ಗೊತ್ತಿಲ್ಲ, 15 ದಿನಗಳ ನಂತರ ನಗರದ ಬೀದಿಗಳಲ್ಲಿ ಒಂದೂ ಬೀದಿ ನಾಯಿ ಕಾಣುವಂತಿಲ್ಲ. ಜನರ ನೆಮ್ಮದಿ ನನಗೆ ಮುಖ್ಯ, ಎಂದು ಶಾಸಕ ಪಾಟೀಲ್ ಅಧಿಕಾರಿಗಳಿಗೆ ತಿಳಿಸಿದರು.
ಕಾಲಕಾಲಕ್ಕೆ ಪಾಲಿಕೆ ನಾಯಿಗಳ ಸಂತಾನಹರಣ ಶಸ್ತ್ರಚಿಕಿಸ್ತೆ ಮಾಡುತ್ತಿದೆ. ಪ್ರತಿ ಶಸ್ತ್ರಚಿಕಿಸ್ತೆಗೆ ಅಂದಾಜು 1000 ರೂಪಾಯಿ ವೆಚ್ಚವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿ, ಈ ವರೆಗೂ ಎಷ್ಟು ನಾಯಿಗಳ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂಬ ಮಾಹಿತಿ ನೀಡಿದರು. ಅದಕ್ಕೆ ಶಾಸಕರು ಇಷ್ಟು ಶಸ್ತ್ರ ಚಿಕಿತ್ಸೆ ಮಾಡಿದರೂ ನಾಯಿಗಳ ಸಂತಾನ ವರ್ಷದಲ್ಲಿ ಎಷ್ಟೋ ಪಟ್ಟು ಹೆಚ್ಚಾಗಿದೆಯಲ್ಲ. ಪ್ರತಿ ಬೀದಿಯಲ್ಲೂ ಹಿಂಡು ಹಿಂಡು ನಾಯಿಗಳೂ ಅವುಗಳ ಮರಿಗಳೂ ಕಾಣುತ್ತವಲ್ಲ ಎಂಬ ಶಾಸಕರ ಪ್ರತ್ಯುತ್ತರಕ್ಕೆ ಅಧಿಕಾರಿಗಳು ಉತ್ತರಿಸಲಿಲ್ಲ. ಕೋಪಗೊಂಡ ಶಾಸಕರು “ಪಾಲಿಕೆಯಲ್ಲಿ ನಾಯಿ ನುಗ್ಗಿಸುವ ಯೋಜನೆ” ಹೇಳಿದ್ದು.
ಯಾವ ಅಧಿಕಾರಿಗೆ ಕೆಲಸ ಮಾಡಲು ಆಸಕ್ತಿ ಅಲ್ಲ ಅವರು ಇಲ್ಲಿಂದ ಬಿಟ್ಟು ಬೇರೆಡೆ ಹೋಗಬೇಕು. ಇಲ್ಲವಾದ್ರೆ ನಾವೇ ವರ್ಗಾವಣೆ ಮಾಡಿಸಬೇಕಾಗುತ್ತದೆ ಎಂದು ಕಿಡಿಕಾರಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಇನ್ನೂ ಪ್ರಮಾಣ ವಚನ ಸ್ವೀಕರಿಸದಿದ್ದರೂ ಬಿಜೆಪಿ ನಗರಸೇವಕರು ಸರಕಾರಿ ಸಭೆಯಲ್ಲಿ ಉಪಸ್ಥಿತರಿದ್ದರು.