Crime NewsKarnataka News
Shocking News: ಕೂದಲುದುರುವ ಸಮಸ್ಯೆಗೆ ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿ

ಇತ್ತೀಚಿನ ದಿನಗಳಲ್ಲಿ ಕೆಲವೊಬ್ಬರು ಸಣ್ಣಪುಟ್ಟ ಕಾರಣಕ್ಕೆಲ್ಲ ಅತ್ಯಂತ ಕೆಟ್ಟ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ದುರ್ಬಲ ಮನಸ್ಥಿತಿಯಲ್ಲಿ ಜೀವವನ್ನೇ ಕಳೆದುಕೊಳ್ಳುವ ತೀರ್ಮಾನ ತೆಗೆದುಕೊಳ್ಳುವ ಮೂಲಕ ಪೋಷಕರನ್ನು ದುಃಖದ ಮಡುವಿಗೆ ತಳ್ಳುತ್ತಾರೆ.
ಇದಕ್ಕೆ ಉದಾಹರಣೆ ಎಂಬಂತೆ ಯುವತಿಯೊಬ್ಬಳು ತಲೆ ಕೂದಲು ಉದುರುತ್ತಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ಜೀವವನ್ನೇ ಕಳೆದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ಮೈಸೂರಿನ ರಾಘವೇಂದ್ರ ನಗರದಲ್ಲಿ ಶುಕ್ರವಾರದಂದು ಈ ಪ್ರಕರಣ ನಡೆದಿದೆ.
21 ವರ್ಷದ ಕಾವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದು, ಈಕೆ ಹಲವು ದಿನಗಳಿಂದ ಕೂದಲುದುರುವ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಎಷ್ಟೇ ಚಿಕಿತ್ಸೆ ಪಡೆದರು ಪರಿಹಾರವಾಗದ ಕಾರಣ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.