ನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ

*ನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ*
—————————————————
ಚ. ಕಿತ್ತೂರ: ಬೆಳಗಾವಿ ಜಿಲ್ಲಾ ಕಂಕನವಾಡಿ ಪಟ್ಟಣದ ಯೋಧರಾದ ಶ್ರೀ ಲಕ್ಷ್ಮಣ ದಂಡಾಪೂರ್ ಅವರು 21 ವರುಷಗಳ ಕಾಲ ಭಾರತ ಮಾತೆಯ ಸೇವೆ ಮಾಡಿ ತಾಯ್ನಾಡಿಗೆ ಮರಳಿ ಬಂದಿದ್ದಾರೆ.
ಇವರ ಭವ್ಯ ಸ್ವಾಗತಕ್ಕಾಗಿ ಇಡಿ ಉತ್ತರ ಕರ್ನಾಟಕದ ಸೈನಿಕರು,ಮಾಜಿ ಸೈನಿಕರು,ಸ್ನೇಹಿತರು ಹಾಗೂ ಸಂಬಂಧಿಗಳು ಭಾಗವಹಿಸಿದ್ದರು. ಅದರಲ್ಲಿ ವಿಶೇಷವಾಗಿ ರಕ್ಷಕ್ ಮಾಜಿ ಸೈನಿಕರ ಸಂಘ, ಸಂಬ್ರಾ, ಯರಗಟ್ಟಿ ತಾಲೂಕ ಮಾಜಿ ಸೈನಿಕರ ಸಂಘ, ರಾಯಬಾಗ ತಾಲೂಕ ಮಾಜಿ ಸೈನಿಕರ ಸಂಘ, ಮುಧೋಳ ತಾಲೂಕ ಮಾಜಿ ಸೈನಿಕರ ಸಂಘ, ಬೆಳಗಾವಿ ಜಿಲ್ಲಾ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಅಲ್ಲದೆ ಹಲವಾರು ತಾಲೂಕಿನ ಮಾಜಿ ಸೈನಿಕರು ಭಾಗವಹಿಸಿದ್ದರು.
ಎಲ್ಲ ಮಾಜಿ ಸೈನಿಕರು ಹಾಗೂ ಗೋಲ್ಡನ್ ಟ್ರೀ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಸಭಾಂಗಣದವರೆಗೇ ಭಾರತ ಮಾತೆಯ ಜಯಕಾರ ಹಾಕುತ್ತ, ಭವ್ಯ ಮೆರವಣಿಗೆ ನಡೆಸುವುದರ ಮುಖಾಂತರ ಬರಮಾಡಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ಪ.ಪೂ.ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶ್ರೀಮತಿ ರಂಜನಾ ಅಪ್ಪಾಯಾಚೆ, ಸಾಂಬ್ರಾ ಗ್ರಾಮ ಪಂಚಾಯತ ಅಧ್ಯಕ್ಷರು, ಕ್ಯಾಪ್ಟನ್ ಲಕ್ಷ್ಮಣ್ ಖವಾಸ್ಪೂರ್, ಕ್ಯಾಪ್ಟನ್ ಗಿರೀಶ್, ಡಾ. ಮಹಾದೇವ ಬಣ್ಣಕ್ಕಗೊಳ್, ಶ್ರೀ ಕುಮಾರ್ ಹಿರೇಮಠ,ಶ್ರೀ ಶಂಕರ ಬಬಲೇಶ್ವರ ಹಾಗೂ ಶ್ರೀ ನಾಗೇಶ್ ದಂಡಾಪೂರ್ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಕಿತ್ತೂರಿನ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದ ಸಂಸ್ಥಾಪಕರು ಹಾಗೂ ನಿವೃತ್ತ ಸೇನಾಧಿಕಾರಿಗಳಾದ ಶ್ರೀ ಪರ್ವೇಜ್ ಹವಾಲ್ದಾರ ಅವರನ್ನು ಅವಹಾನಿಸಿದ್ದರು. ನಿವೃತ್ತ ಯೋಧ್ ಲಕ್ಷ್ಮಣ್ ದಂಡಾಪೂರ್ ಅವರನ್ನು ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದ ವತಿಯಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನಿಸಿ ಸ್ವಾಗತ ಕೋರಲಾಯಿತು.