Karnataka News
ಗ್ರಾಮ ಪಂಚಾಯಿತಿ ಕಚೇರಿಯಲ್ಲೇ PDO ಮುತ್ತು ಕೊಟ್ಟ ಸದಸ್ಯ. ದೃಶ್ಯ ಸಿಸಿಟಿವಿಯಲ್ಲಿ ಸೆರೆ

ತುಮಕೂರು: ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಸದಸ್ಯನ ಪಿಡಿಓಗೆ ಮುತ್ತು ಕೊಟ್ಟ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿ ಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸದಸ್ಯ ಪ್ರಸನ್ನ, ಪಿಡಿಓ ಕೋಕಿಲಾ ಅವರಿಗೆ ಕಚೇರಿಯಲ್ಲೇ ಪಿಡಿಒ ಕೈ ಹಿಡಿದು ಚುಂಬಿಸಿದ್ದಾರೆ. ಮತ್ತೊಂದು ದೃಶ್ಯದಲ್ಲಿ ಪಿಡಿಓ ಅವರ ಕೈ ಹಿಡಿದುಕೊಂಡು ಬಲವಂತವಾಗಿ ಎಳೆದಾಡಿ ಮುತ್ತುಕೊಟ್ಟಿದ್ದಾನೆ.
ಕೆಲ ದಿನಗಳ ಹಿಂದೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ