National
BREAKING NEWS : ‘ಮೊಹಮ್ಮದ್ ಜುಬೈರ್’ ಜಾಮೀನು ಅರ್ಜಿ ವಜಾ, 14 ದಿನ ನ್ಯಾಯಾಂಗ ಬಂಧನ

ನವದೆಹಲಿ : ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (CMM) ಶನಿವಾರ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮತ್ತು ಪತ್ರಕರ್ತ ಮೊಹಮ್ಮದ್ ಜುಬೈರ್ ಅವ್ರ ಜಾಮೀನು ಅರ್ಜಿಯನ್ನ ತಿರಸ್ಕರಿಸಿದ್ದಾರೆ. ಇನ್ನು ಈ ಪತ್ರಕರ್ತನನ್ನ ಪಟಿಯಾಲ ಹೌಸ್ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಝುಬೈರ್ ಸಹ-ಸಂಸ್ಥಾಪಕರಾಗಿರುವ ಆಲ್ಟ್ ನ್ಯೂಸ್ ಮಾತೃಸಂಸ್ಥೆ ಪ್ರವ್ಡಾ ಮೀಡಿಯಾ ವಿದೇಶಗಳಿಂದ ₹2,31,933 ಮೊತ್ತದ ಹಣವನ್ನ ಸ್ವೀಕರಿಸಿದೆ ಎಂದು ದೆಹಲಿ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಜುಬೈರ್ 4 ದಿನಗಳ ಪೊಲೀಸ್ ಕಸ್ಟಡಿ ಇಂದು ಕೊನೆಗೊಂಡಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಇನ್ನು ನ್ಯಾಯಾಲಯದ ಮುಂದೆ ದೆಹಲಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಕೋರಿದ್ದರು. ಸಧ್ಯ ಪೊಲೀಸರ ಮನವಿಯನ್ನ ಪುರಸ್ಕರಿಸಿದ ನ್ಯಾಯಾಲಯ, ಮೊಹಮ್ಮದ್ ಜುಬೈರ್ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ.