Crime News
ಹೆಂಡತಿಗೆ ಬೈದ ಗೆಳೆಯನನ್ನೇ ಕಲ್ಲು ಎತ್ತಿ ಹಾಕಿ ಕೊಂದ ಗಂಡ!

ಬಳ್ಳಾರಿ ಬಸ್ ನಿಲ್ದಾಣದಲ್ಲಿ ಹಾಡ ಹಗಲೇ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿದೆ. ಕಟ್ಟಡ ಕಾರ್ಮಿಕ ತಮ್ಮಣ್ಣ (43) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಈತ ಆಂದ್ರದ ರಾಯದುರ್ಗ
ಈತನ ಸ್ನೇಹಿತ ಶ್ರೀರಾಮ್ ಕಲ್ಲಿನಿಂದ ತಮ್ಮಣ್ಣನ ತಲೆಗೆ ಜಜ್ಜಿ ಕೊಲೆ ಮಾಡಿದ್ದಾನೆ.
ಕೂಡಲೇ KSRTC ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ರು. ಸ್ಥಳಕ್ಕಾಗಮಿಸಿದ ಬ್ರೂಸ್ ಪೇಟೆ ಪೊಲೀಸರು ಆರೋಪಿ ಶ್ರೀರಾಮನನ್ನು ಬಂಧಿಸಿದ್ದಾರೆ. ಶ್ರೀರಾಮ್ ಹೆಂಡತಿಗೆ ತಮ್ಮಣ್ಣ ಬೈದಿದ್ದಕ್ಕೆ ಸಿಟ್ಟಿಗೆದ್ದು ಕಲ್ಲಿನಿಂದ ಹೊಡೆದೆ ಎಂದು ಆರೋಪಿ ಶ್ರೀರಾಮ ಹೇಳಿದ್ದಾನೆ.
ಕಟ್ಟಡ ಕೆಲಸಕ್ಕೆ ಎಂದು ರಾಯದುರ್ಗದ ಚದಂದೊಡ್ಡಿ ಗ್ರಾಮದಿಂದ ಇಬ್ಬರು ಸಹ ಬಳ್ಳಾರಿಗೆ ಬಂದಿದ್ರು. ಕುಡಿದಮತ್ತಿನಲ್ಲಿ ಜಗಳವಾಡಿಕೊಂಡು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.