
ಪಣಜಿ: ಕಳೆದ ನಾಲ್ಕು ದಿನಗಳಿಂದ ಗೋವಾ ತಾಜ್ ಹೋಟೆಲ್‍ನಲ್ಲಿ ತಂಗಿದ್ದ ರೆಬೆಲ್ ಶಾಸಕರು ಶನಿವಾರ ಸಂಜೆ ಮುಂಬಯಿಗೆ ವಾಪಸ್ಸಾಗಿದ್ದಾರೆ. ರೆಬೆಲ್ ಶಾಸಕರೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ರವರು ಕೂಡ ವಾಪಸ್ಸಾಗಿದ್ದಾರೆ.
ಜುಲೈ 3 ರಂದು ಮಹಾರಾಷ್ಟ್ರ ವಿಧಾನಸಭಾ ಅಧಿವೇಶನ ನಡೆಯಲಿದ್ದು ಮುಖ್ಯಮಂತ್ರಿ ಏಕನಾಥ ಶಿಂಧೆ ರವರು ತಮ್ಮ ಬಹುಮತ ಸಾಬೀತುಪಡಿಸಬೇಕಿದೆ.
ಬಂಡಾಯ ಶಾಸಕರಿಗಾಗಿ ಪಣಜಿ ಸಮೀಪದ ದೋನಾಪಾವುಲ್‍ನ ತಾಜ್ ರೆಸಾರ್ಟ್ ನಲ್ಲಿ 74 ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು. ಈ ಶಾಸಕರು ಮೊದಲು ಗುಜರಾತ್‍ಗೆ ತೆರಳಿದ್ದರು, ಬಳಿಕ ಗುವಾಹಟಿ, ನಂತರ ಗೋವಾಕ್ಕೆ ಆಗಮಿದ್ದರು. ಬಿಜೆಪಿ ಆಡಳಿತವಿರುವ ಈ ಮೂರು ರಾಜ್ಯಗಳಲ್ಲಿ ಬಂಡಾಯ ಶಾಸಕರು ವಾಸ್ತವ್ಯ ಹೂಡಿದ್ದರು.